ಕರುನಾಡು ಬಾ ಬೆಳಕು ಕಾರ್ಕಳದ ತಂಡವು ಹಳ್ಳಿ ಹಳ್ಳಿಗಳಿಗೆ ಹೋಗಿ ಮನೆಯನ್ನು ಬೆಳಗುವ ಕೆಲಸವನ್ನು ಮಾಡುತ್ತಿದೆ. ಇವರ ಸೇವೆಯನ್ನು ಗಮನಿಸಿದ ಹಲವಾರು ತಂಡಗಳು ಇವರ ಜೊತೆ ಕೈಗೂಡಿಸಿ ಹಲವಾರು ದಾನಿಗಳು ಇವರ ಮುಖಾಂತರ ಸೋಲಾರ್ ಬೆಳಕನ್ನು ನೀಡಲು ಮುಂದಾಗುತ್ತಿದ್ದಾರೆ
ಕಾರ್ಕಳದ ಪರಿಸರದಲ್ಲಿ 17 ಮನೆಗಳನ್ನು ಬೆಳಗಿಸಿದ ಕೀರ್ತಿ ಈ ತಂಡಕ್ಕೆ ಸಲ್ಲುತ್ತದೆ. 17ನೇ ಮನೆಯನ್ನು ಕಾರ್ಕಳದ ಯುವ ಉದ್ಯಮಿ ರಾಜೇಂದ್ರ ಅಮೀನ್ ಅವರು ತಮ್ಮ ಹುಟ್ಟಿದ ಹಬ್ಬದ ಸಲುವಾಗಿ ಕಾರ್ಕಳ ಪರಿಸರದ ಮನೆಯನ್ನು ಸೋಲಾರ್ ಬೆಳಕಿನಿಂದ ಬೆಳಗಿಸಿದರು.
ರೋಟರಿ ಆನ್ಸ್ ಕ್ಲಬಿನ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ , ಯುವವಾಹಿನಿ ತಂಡದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸ್ವಚ್ಛ ಸದಸ್ಯ ನಿಖಿಲ್ ಆಚಾರ್ಯ, ಮಂಜುನಾಥ ಪೈ, ಯುವವಾಹಿನಿ ಪ್ರಕಾಶ್ ಸಾಲಿಯಾನ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾಹೀರಾತು
Post a comment