ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಕಾರ್ಕಳ ಹಾಗೂ ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಇತ್ತೀಚೆಗೆ ಹೋಟೆಲ್ ಸ್ವಾಗತ್ ಇದರ ಸಭಾಂಗಣದಲ್ಲಿ ಸುಮಾರು 40ಕ್ಕಿಂತಲೂ ಹೆಚ್ಚು ಮೇಸ್ತ್ರಿ ಗಳಿಗೆ ಅವರ ಕೆಲಸ ಕಾರ್ಯಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡುವ ತರಬೇತಿ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ರೊ ಪ್ರಶಾಂತ್ ಬೆಳಿರಾಯ ವಹಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ತರಬೇತಿ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಮಾರ್ಗದರ್ಶಕರಾದ ರೊ. ಪಿಡಿಜಿ ಡಾ. ಭರತೇಶ್ ಆದಿರಾಜ್ ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ ಭಾಗವಹಿಸಿದ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ನ ತಾಂತ್ರಿಕ ಸೇವಾ ವಿಭಾಗದ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿರುವ ರಾಘವೇಂದ್ರರವರು ತರಬೇತಿಯನ್ನು ನೀಡಿದರು. ಸಭಾ ಕಾರ್ಯಕ್ರಮದಲ್ಲಿ ನಮ್ಮ ಕ್ಲಬ್ಬಿನ ಇನ್ನೋರ್ವ ಮಾರ್ಗದರ್ಶಕರಾದ ರೊ.ಚಂದ್ರಶೇಖರ ಹೆಗ್ಡೆ, ಪೂರ್ವಾಧ್ಯಕ್ಷರಾದ ರೊ.ಸುರೇಂದ್ರ ನಾಯಕ್, ರೊ.ರಾಜೇಶ್ ಕುಂಟಾಡಿ, ರೊ. ಹರೀಶ್ ಅಂಚನ್ ಉಪಸ್ಥಿತರಿದ್ದರು.
ಸಿವಿಲ್ ಇಂಜಿನಿಯರ್ಸ್ ಅಸೋಸಿಯೆಶನ್ ನ ಅಧ್ಯಕ್ಷರಾದ ರೊ. ಹಿತೇಶ್ ಶೆಟ್ಟಿಯವರು ವಂದನಾರ್ಪಣೆಗೈದರು. ರೋಟರಿ ಕ್ಲಬ್ಬಿನ ಕಾರ್ಯದರ್ಶಿಗಳಾದ ರೊ. ಗಣೇಶ್ ಬರ್ಲಾಯ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
Post a comment