ಕೊರೋನಾ ಸಂಧರ್ಭದಲ್ಲಿ ಮಾಡಿದ ಸಮಾಜಸೇವೆಗಾಗಿ ಲಯನ್ಸ್ ಕ್ಲಬ್ ಬೆಂಗಳೂರು ಮಲ್ಲೇಶ್ವರಂ ಹೆರಿಟೇಜ್ ರವರು ಮಾಳ ಹರ್ಷೇ೦ದ್ರ ಜೈನ್ ರವರಿಗೆ ವರ್ಲ್ಡ್ ಅಪ್ರಿಷಿಯೇಶನ್ ಪ್ರಶಸ್ತಿ ನೀಡಿ ಗೌರವಿಸಿದೆ.
ಮಾಳ ಹರ್ಷೇ೦ದ್ರ ಜೈನ್ ರವರು 42 ದಿನಗಳ ಲಾಕ್ ಡೌನ್ ನ ಸಂಕಷ್ಟದ ಸಂಧರ್ಭದಲ್ಲಿ 27000 ಕ್ಕೂ ಹೆಚ್ಚು ಜನರ ಹಸಿವನ್ನು ನೀಗಿಸುವ ಅಲ್ಲದೆ 175 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಕಿಟ್ ವಿತರಿಸುವ ಮೂಲಕ ನೆರವಾಗಿದ್ದಾರೆ.ಸುಮಾರು 60 ಕ್ಕೂ ಹೆಚ್ಚು ಬಾರಿ ರಕ್ತದಾನವನ್ನು ಮಾಡಿ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಅಲ್ಲದೆ ಹಲವಾರು ಸಮಾಜಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತನ್ನದೇ ಕೊಡುಗೆಗಳನ್ನು ನೀಡುತ್ತಾ ಅಂದಿದ್ದಾರೆ.
ಇವರ ವಿಶೇಷ ಸೇವೆಯನ್ನು ಗುರುತಿಸಿದ ಲಯನ್ಸ್ ಕ್ಲಬ್ ಬೆಂಗಳೂರು ಮಲ್ಲೇಶ್ವರಂ ಹೆರಿಟೇಜ್ ವರ್ಲ್ಡ್ ಅಪ್ರಿಷಿಯೇಶನ್ ದಿನದಂದು 'ವರ್ಲ್ಡ್ ಅಪ್ರಿಷಿಯೇಶನ್' ಪ್ರಶಸ್ತಿ ನೀಡಿ ಗೌರವಿಸಿದೆ.
ಜಾಹೀರಾತು
Post a comment