ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಸಭೆ ದಿನಾಂಕ 6-12-2020 ರಂದು ಶಾಂತಿನಿಕೇತನ ಸಭಾಂಗಣದಲ್ಲಿ ಅಧ್ಯಕ್ಷರಾದ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮೀಣ ಭಾಗದಲ್ಲಿ ಜನರಿಗೆ ಉತ್ತಮ ಹಣಕಾಸಿನ ಸೇವೆಯನ್ನು ನೀಡುವುದರೊಂದಿಗೆ ಇತರೆ ಸೇವೆಗಳನ್ನು ನೀಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಸದಸ್ಯರು ಆರ್ಥಿಕ -ಸಾಮಾಜಿಕ -ಶೈಕ್ಷಣಿಕವಾಗಿ ಸದೃಡ ಗೊಳ್ಳಬೇಕು ಈ ನಿಟ್ಟಿನಲ್ಲಿ ನಮ್ಮ ಸಕ್ಕರೆಯೂ ಸಕಲ ಪ್ರೋತ್ಸಾಹವನ್ನು ನೀಡುತ್ತದೆ.ಅಲ್ಲದೆ ಶಾಂತಿನಿಕೇತನ ಯುವ ವೃಂದದ 14 ಯೋಜನೆ ಪ್ರಯೋಜನವನ್ನು ಸೌಹಾರ್ದ ಸಹಕಾರಿಯ ಸದಸ್ಯರಿಗೂ ನೀಡಲಾಗುತ್ತದೆ ಎಂದು ರಾಜೇಶ ಅವರು ತಿಳಿಸಿದರು.ಗೌರವ ಸಲಹೆಗಾರರಾದ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಸೀನಿಯರ್ ಮ್ಯಾನೇಜರ್ ಆದ ಸಂತೆಕಟ್ಟೆ ನರಸಿಂಹ ನಾಯ್ಕ ರವರು ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉತ್ತಮ ಹಾಗೂ ತೊಡಗಿಕೊಂಡಲ್ಲಿ ಉತ್ತಮ ಫಲಿತಾಂಶ ಸಾಧ್ಯ ಎಂದರು ಹಾಗೂ ನಮ್ಮ ಈ ಕಡಿಮೆ ಅವಧಿಯ ಬೆಳವಣಿಗೆಯ ಕುರಿತು ಶ್ಲಾಘಿಸಿ ಅನೇಕ ಸಲಹೆಗಳನ್ನು ನೀಡಿದರು..
ಮುಖ್ಯಕಾರ್ಯನಿರ್ವಾಹಕ ರಾದ ನರೇಂದ್ರ ರವರು ನಿರೂಪಿಸಿ , ಸಹಕಾರಿಯ ವ್ಯವಸ್ಥಾಪಕರಾದ ರಾಜೇಶ್ರೀ ಸ್ವಾಗತಿಸಿ , ಉಪಾಧ್ಯಕ್ಷರಾದ ರವೀಶ್ ವಂದಿಸಿದರು.ಆಡಳಿತ ಮಂಡಳಿಯ ಸದಸ್ಯರು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಜಾಹೀರಾತು
Post a comment