January 2021

 ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಯೋಗೀಶ್ ನಯನ್ ಇನ್ನ ಗೆಲುವು 


ಕಾರ್ಕಳ:ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಆಂತರಿಕ ಚುನಾವಣೆ ಯಲ್ಲಿ ಯೋಗೀಶ್ ನಯನ್ ಇನ್ನ ವಿಜಯಿಯಾಗಿದ್ದಾರೆ.


ಯೋಗೀಶ್ ನಯನ್ ಇನ್ನ,ಸುಹಾಸ್ ಕಾವ,ಪ್ರದೀಪ್ ಬೇಲಾಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಪ್ರದೀಪ್ ಬೇಲಾಡಿ 25 ಸುಹಾಸ್ ಕಾವ 320 ಯೋಗೀಶ್ ನಯನ್ ಇನ್ನ 344 ಮತಗಳನ್ನು ಪಡೆದಿದ್ದಾರೆ.

ಸುಹಾಸ್ ಕಾವ

ಯೋಗೀಶ್ 24  ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. 
ಪ್ರದೀಪ್ ಬೇಲಾಡಿ

ಕಾರ್ಕಳ ಬ್ಲಾಕ್  ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ  ನಡೆಯಲಿರುವ ಚುನಾವಣೆಗೆ ಡಿಸೆಂಬರ್‌ 31 ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು.ಜನವರಿ 12ರಂದು ಚುನಾವಣೆ  ನಡೆದಿದ್ದು ಕೋವಿಡ್‌ ಕಾರಣಕ್ಕಾಗಿ ಈ ಬಾರಿ ಆನ್‌ಲೈನ್‌ನಲ್ಲಿ ಮತದಾನ ನಡೆದಿತ್ತು.ಕಾರ್ಕಳದಲ್ಲಿರುವ  ಇರುವ ಒಟ್ಟು 923 ಮತದಾನವನ್ನು ಮಾಡುವ ಅವಕಾಶವಿದ್ದರೂ 803 ಮಂದಿ ಮತದಾನ ಮಾಡಿದ್ದರು.ಅದರಲ್ಲಿ 55 ಮತಗಳು ನಿರಾಕರಣೆಯಾಗಿದೆ.

ಜಾಹೀರಾತು 
ಬೈಲೂರು:ಕಾರ್ಕಳ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟನೆ 
ಸಮ್ಮೇಳನಾಧ್ಯಕ್ಷ  ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಮನೋಹರ್ ಪ್ರಸಾದ್ ಮಾತು 
ಸಂಪೂರ್ಣ ವರದಿ:ಟೈಮ್ಸ್ ಆಫ್ ಕಾರ್ಕಳ  

ಕಾರ್ಕಳ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿ  ನಡೆಯಿತು.

ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಾಹಿತ್ಯದ ಉಳಿವಿನ ಮೂಲಕ‌ ಮಾನವೀಯತೆ ಉಳಿಯಬೇಕು. ಸಾಹಿತ್ಯ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕ .ಸಾಂಸ್ಕೃತಿಕ ವಿಚಾರಗಳು ಉಳಿಯಬೇಕಾದರೆ ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಸಾಹಿತ್ಯದ‌ ಮೂಲಕ ಭಾರತೀಯ ಸಂಸ್ಕೃತಿಯು ಉಳಿಸಲು ಸಾಧ್ಯವಿದೆ ಎಂದು ಹೇಳಿದರು.ತಂತ್ರಜ್ಞಾನ ಬೆಳೆಯುವ ಸಂದರ್ಭದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ, ಕನ್ನಡವನ್ನು ಉಳಿಸುವ ಸಲುವಾಗಿ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ ಎಂದರು.

ಈ‌ ಸಂದರ್ಭದಲ್ಲಿ ಬೈಲೂರಿನ ಹಿರಿಯ ವೈದ್ಯ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಡಾ.ದಿನೇಶ್ಚಂದ್ರ ಹೆಗ್ಡೆ,ಖ್ಯಾತ ನ್ಯಾಯವಾದಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ  ಎಂ ಕೆ ವಿಜಯ ಕುಮಾರ್  ಹಾಗೂ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಬಾಲ ಸಾಹಿತಿ ಅವನಿ ಉಪಾಧ್ಯಾಯ ಅವರ ಧಾರಿಣೀ ಪುಸ್ತಕ ಬಿಡುಗಡೆಗೊಡಿಸಲಾಯಿತು.

ಸಮ್ಮೇಳನಾಧ್ಯಕ್ಷ  ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಮನೋಹರ್ ಪ್ರಸಾದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದು ನಮಗೆ ಹಿತವನ್ನು ಉಂಟುಮಾಡುತ್ತದೆಯೋ ಅದು ಸಾಹಿತ್ಯ.ಬಾಲ್ಯದ ನೆನಪುಗಳ ಉತ್ಖನನಗಳ ಅವಕಾಶವೇ ಸಾಹಿತ್ಯದ ತಿರುಳು. ಕನ್ನಡವನ್ನು ಓದುವ ಹವ್ಯಾಸ ಮಕ್ಕಳಲ್ಲಿ ಬೆಳೆಸುವ ಕೆಲಸವಾಗಬೇಕು. ಏಕಾಗ್ರತೆಯ ಕೊರತೆಯಿದ್ದು ಅದನ್ನು ಬೆಳೆಸುವ ಕೆಲಸ ಆಗಬೇಕು. ಭಾಷೆಯ ಶುದ್ದಿಯಿಲ್ಲದೇ ಭಾಷೆ ಕರಗತವಾಗಲು ಸಾಧ್ಯವಿಲ್ಲ ಎಂದರು.

ಕಾರ್ಕಳ ಸರ್ವಧರ್ಮಗಳ ನೆಲೆವೀಡು, ಮಕ್ಕಳು ಮೊಬೈಲ್ ಬದಿಗಿರಿಸಿ ಓದುವಿಕೆಯನ್ನು ಹವ್ಯಾಸವಾಗಿಸಬೇಕು ಎಂದು ಕರೆನೀಡಿದರು.ಬದುಕು ಕ್ಲಿಷ್ಟಕರವಾದಷ್ಟು ತಿಳುವಳಿಕೆ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಕೃಷಿ ಮತ್ತು ಅರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ  ಸುಮಿತ್ ಶೆಟ್ಟಿ,ಕನ್ನಡ ಸಾಹಿತ್ಯ ಪರೀಚ್ಸ್ತ್ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ್ ಕೊಂಡಳ್ಳಿ,ಉದ್ಯಮಿ ಜಿ ಸುಧೀರ್ ಹೆಗ್ಡೆ ಬೈಲೂರು,ಉದ್ಯಮಿ ಸಾಂಸ್ಕೃತಿಕ ಚಿಂತಕ ಗುರ್ಮೆ ಸುರೇಶ್ ಶೆಟ್ಟಿ,ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಮಡಿವಾಳ,ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ವಾಗ್ಲೆ, ಕಾರ್ಕಳ ತಾಲೂಕು  ತಹಸೀಲ್ದಾರ ಪುರಂದರ ಹೆಗ್ಡೆ,ಕಾರ್ಕಳ ಕಾರ್ಯನಿರ್ವಹಾಣಾಧಿಕಾರಿ ಮೇಜರ್ ಹರ್ಷ,ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಕಾರ್ಕಳ ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ,ತಾಲೂಕು ಪಂಚಾಯತ್ ಸದಸ್ಯೆ ನಿರ್ಮಲಾ ರಾಣೆ,ಉಡುಪಿ ಜಿಲ್ಲೆ ಕ.ಸ.ಪಾ.  ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಪ್ರಾಚಾರ್ಯರಾದ  ಗುರುಮೂರ್ತಿ ಎನ್.ಟಿ.ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಉಪಪ್ರಾಚಾರ್ಯ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ ಶಾಂತಿನಾಥ ಜೋಗಿ ಧನ್ಯವಾದಗೈದರು.

ಜಾಹೀರಾತು ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದು  ವಿದ್ಯುತ್‌ ಕಂಬ ತುಂಡಾದ ಘಟನೆ ಬಂಢಿಮಠ-ಕಾರ್ಕಳ ಬಳಿ ದಿನಾಂಕ 25/01/2021  ರಂದು ಬೆಳಿಗ್ಗೆ ನಡೆದಿದೆ.

ಕಾರ್ಕಳ: ದಿನಾಂಕ 25/01/2021 ರಂದು ಬೆಳಿಗ್ಗೆ 04:00 ಗಂಟೆಯಿಂದ 06:00 ಗಂಟೆಯ ನಡುವೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಸಾಲ್ಮರ ಎಂಬಲ್ಲಿ ಹಾದು ಹೋಗುವ ಬಂಢಿಮಠ-ಕಾರ್ಕಳ ಸಾರ್ವಜನಿಕ ಡಾಮಾರು ರಸ್ತೆಯ ಮಧ್ಯೆ ಇರುವ ರಸ್ತೆ ವಿಭಾಜಕದಲ್ಲಿರುವ ವಿದ್ಯುತ್‌ ಕಂಬಕ್ಕೆ ಬಸ್ಸು ನಂಬ್ರ KA-51-C-1653 ನೇಯದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್‌ ಕಂಬವು ತುಂಡಾಗಿದ್ದು ಅಪಘಾತದಿಂದ 0.51 ಲಕ್ಷ ರೂಪಾಯಿ ನಷ್ಟವಾಗಿರುವುದಾಗಿ ಮುಖ್ಯಾಧಿಕಾರಿಯವರು ಕಾರ್ಕಳ ಪುರಸಭೆ ಕಾರ್ಕಳ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜಾಹೀರಾತು 


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget