ರಾಜ್ಯ ಸಭಾ ಸದಸ್ಯ,ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ 1,11,111 ರೂಪಾಯಿಗಳನ್ನು ಸೋಮವಾರ ರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ದೇಣಿಗೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಚೆಕ್ ಅನ್ನು ಕಳುಹಿಸಿದ್ದು ರಾಮಮಂದಿರ ನಿರ್ಮಾಣಕ್ಕೆ ಪಡೆಯುವ ದೇಣಿಗೆ ಸೌಹಾರ್ದಯುತವಾಗಿರಲಿ,ಈ ಹಿಂದೆ ದೇಣಿಗೆ ಪಡೆದ ವಿವರವನ್ನು ವಿಶ್ವ ಹಿಂದೂ ಪರಿಷತ್ ಜನರ ಮುಂದಿಡಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಧರ್ಮವು ಒಂದು ರಾಜಕೀಯ ಸಾಧನವಲ್ಲ, ಮನುಷ್ಯ ಮತ್ತು ದೇವರ ನಡುವಿನ ವಿಷಯವಾಗಿದ್ದು, ಈ ಮೂಲಕ ದೇವಾಲಯಕ್ಕೆ ದೇಣಿಗೆಯನ್ನು ವೈಯಕ್ತಿಕ ಆಯ್ಕೆಯಂತೆ ಪರಿಗಣಿಸಬೇಕು ಮತ್ತು ಹಿಂಸೆಯ ಬೆದರಿಕೆಯಡಿಯಲ್ಲಿ ಸಂಗ್ರಹವನ್ನು ಮಾಡಬಾರದು, ದೊಣ್ಣೆ, ಕತ್ತಿಯಂತಹ ಆಯುಧಗಳಿಂದ ದೊಡ್ಡ ಪ್ರಮಾಣದ ದೇಣಿಗೆಯ ಅಭಿಯಾನಗಳನ್ನು ನಡೆಸುತ್ತಿರುವ ಕೆಲವು ಸಂಘಟನೆಗಳತ್ತ ನಿಮ್ಮ ಗಮನ ಸೆಳೆಯಲು ನಾನು ಬಯಸುತ್ತೇನೆ. ದೇಣಿಗೆ ಸಂಗ್ರಹಿಸಲು ಆಯುಧಗಳನ್ನು ಹೊಂದಿರುವ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗುವುದು, ಯಾವುದೇ ಧಾರ್ಮಿಕ ಆಚರಣೆ ಅಥವಾ ಚಟುವಟಿಕೆಯ ಭಾಗವಾಗಲಾರದು ಎಂದು ನಾನು ಭಾವಿಸುತ್ತೇನೆ" ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಾಹೀರಾತು
Post a comment