ಯುವಕರನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ, RPCA ಕಾರ್ಕಳ ಹಾಗೂ ಕಾರ್ಕಳದ ಯುವಜನತೆಯ ಸಹಭಾಗಿತ್ವ ದಲ್ಲಿ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಗುಡ್ಡಗಾಡು ಓಟವನ್ನು ಗಣರಾಜ್ಯೋತ್ಸವದಂದು ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡಾ ಕೂಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 220 ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿ, ಕ್ರೀಡಾಂಗಣದ ತುಂಬಾ ನೆರೆದಿದ್ದ 600ಕ್ಕೂ ಹೆಚ್ಚಿನ ಜನತೆ ಕ್ರೀಡೆಯ ಮೆರುಗನ್ನು ಹೆಚ್ಚಿಸಿತ್ತು.
ಕಾರ್ಯಕ್ರಮದ ಉದ್ಘಾಟನೇಯನ್ನು ಶಾಸಕ ಶ್ರೀ ವಿ. ಸುನಿಲ್ ಕುಮಾರ್ ಅವರು ನೆರವೇರಿಸಿದರು ಹಾಗೂ ಈ ಸಂದರ್ಭದಲ್ಲಿ DYSP ಭಾರತ್ ರೆಡ್ಡಿ, ರೆಟೈರ್ಡ್ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಗಿಲ್ಬರ್ಟ್ ಬ್ರಿಗೇಝಜ್, ಮಾಜಿ ಸೈನಿಕರಾದ ಹಿರಿಯಣ್ಣ, ತಾಲೂಕು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ANF SP ನಿಖಿಲ್ ಕುಮಾರ್ IPS, ಅಂತಾರಾಷ್ಟ್ರೀಯ ಕ್ರೀಡಾ ಪಟು ರೋಹಿತ್ ಕುಮಾರ್ ಕಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಶಿಧರ್ ಜಿ, ನಗರ ಠಾಣೆಯ ನಿರೀಕ್ಷಕರಾದ ಮಧು ಹಾಗೂ ಗ್ರಾಮಾಂತರ ಠಾಣೆಯ ತೇಜಸ್ವಿ ಹಾಗೂ RPCA ನಿರ್ದೇಶಕರಾದ ರಾಘವೇಂದ್ರ ಪ್ರಭು ಇವರು ಉಪಸ್ಥಿತರಿದ್ದರು.
21km ಹುಡುಗರ ವಿಭಾಗದಲ್ಲಿ ಸಚಿನ್ ಪೂಜಾರಿ ಹಾಗೂ ಹುಡುಗಿಯರ ವಿಭಾಗದಲ್ಲಿ ನಿಟ್ಟೆಯ ಕಾಲೇಜಿನ ಭೂಮಿಕಾ ಅವರು ಪ್ರಥಮ ಸ್ಥಾನಿಯಾಗಿ 5000/- ದ ನಗದನ್ನು ತನ್ನದಾಗಿಸಿದರು.
ಸ್ಪರ್ಧಿಗಳಿಗೆ ವಿವಿಧ ವಿಭಾಗದಲ್ಲಿ ಬಹುಮಾನವನ್ನು ಸಮಾರೋಪ ಸಮಾರಂಭದಲ್ಲಿ ನೀಡಿರುವುದಲ್ಲದೆ ಕಾರ್ಲ ಕಜೆಯನ್ನು ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳಿಗೆ ವಿತರಿಸಲಾಯಿತು.
ಜಾಹೀರಾತು
Post a comment