ಹೆಬ್ರಿ :ಸ್ವಯಂಪ್ರೇರಿತ ಬೃಹತ್‌ ರಕ್ತದಾನ ಶಿಬಿರ.132 ಯುನಿಟ್‌ ರಕ್ತ ಸಂಗ್ರಹ:143ಮಂದಿಯ ರಕ್ತ ವರ್ಗೀಕರಣ.-Times of karkala

ಹೆಬ್ರಿ : ಹಿಂದೂ ಜಾಗರಣ ವೇದಿಕೆ ಹೆಬ್ರಿ ತಾಲ್ಲೂಕು, ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌, ಅಭಯಹಸ್ತ ಹೆಲ್ಪ್‌ ಲೈನ್‌ ರಕ್ತನಿಧಿ ಕೆಎಂಸಿ ಮಣಿಪಾಲ ಇದರ ವತಿಯಿಂದ ರಾಮ ಮಂದಿರದಲ್ಲಿ ಭಾನುವಾರ ಸ್ವಯಂಪ್ರೇರಿತ ಬೃಹತ್‌ ರಕ್ತದಾನ ಶಿಬಿರ ನಡೆಯಿತು. 

 


ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಡಾ.ಭಾರ್ಗವಿ ಆರ್.‌ ಐತಾಳ್‌ ಸ್ವಯಂಪ್ರೇರಿತ ಬೃಹತ್‌ ರಕ್ತದಾನ ಶಿಬಿರವನ್ನುಉದ್ಘಾಟಿಸಿದರು. ರಕ್ತದ ಅಪತ್ಭಾಂದವ ಸತೀಶ್‌ ಸಾಲ್ಯಾನ್‌ ಅವರನ್ನು ಸನ್ಮಾನಿಸಲಾಯಿತು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್‌ ನಾಯಕ್‌, ಹಿಂದು ಜಾಗರಣ ವೇದಿಕೆಯ ಮಾತೃ ಸುರಕ್ಷಾ ವಿಭಾಗದ ಜಿಲ್ಲಾ ಪ್ರಮುಖ್‌ ಹೆಬ್ರಿ ದಿನೇಶ್‌ ಶೆಟ್ಟಿ, ವೈದ್ಯಾಧಿಕಾರಿ ಡಾ. ದಿವ್ಯ, ಅಭಯಹಸ್ತ ಹೆಲ್ಪ್‌ ಲೈನ್‌ ಅಧ್ಯಕ್ಷ ರಾಜೇಶ್‌ ಶೆಟ್ಟಿ, ಲಯನ್ಸ್‌ ಕ್ಲಬ್‌ ಸ್ಥಾಪಕ ಅಧ್ಯಕ್ಷ ದಿನಕರ ಪ್ರಭು, ಕಾರ್ಯದರ್ಶಿ ರಾಮಚಂದ್ರ ಭಟ್‌, ಕೋಶಾಧಿಕಾರಿ ರಘುರಾಮ ಶೆಟ್ಟಿ, ಪೂರ್ವಾಧ್ಯಕ್ಷ ರಮೇಶ ಆಚಾರ್ ಇದ್ದರು. ಕ್ಷಮಾ ನಿರೂಪಿಸಿದರು. 


ಜಾಹೀರಾತು 












Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget