ಕಾರ್ಕಳ:ಪತ್ರಕರ್ತನ ಮೇಲೆ ಡಿವೈಎಸ್ಪಿ ದೌರ್ಜನ್ಯ ಪ್ರಕರಣ,15 ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆ ಆಯೋಗದಿಂದ ನೋಟೀಸ್-Times of karkala

ಪತ್ರಕರ್ತನ ಮೇಲೆ ಡಿವೈಎಸ್ಪಿ ದೌರ್ಜನ್ಯ ಪ್ರಕರಣ: ೧೫ ದಿನಗಳೊಳಗೆ ಲಿಖಿತ ಉತ್ತರ ನೀಡುವಂತೆ ಎಸ್‌ಸಿ ಎಸ್‌ಟಿ ಆಯೋಗದಿಂದ ನೋಟೀಸ್


ಕಾರ್ಕಳ: ಪರಿಶಿಷ್ಠ ಪಂಗಡದ ಪತ್ರಕರ್ತ ಕೃಷ್ಣ ನಾಯ್ಕ್ ಎಂಬವರಿಗೆ ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ತಮ್ಮಕಚೇರಿಯಲ್ಲಿ ಕೂಡಿಹಾಕಿ ಮೊಬೈಲ್ ಕಸಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬoಧಿಸಿದoತೆ ಕರ್ನಾಟಕ ರಾಜ್ಯ ಎಸ್‌ಸಿ ಎಸ್‌ಟಿ ಆಯೋಗವು ಈ ಪ್ರಕರಣದ ಕುರಿತ ದೋಷಾರೋಪಣೆ ಸಂಬAಧ ಕೈಗೊಂಡ ಕ್ರಮಗಳ ಬಗ್ಗೆ ೧೫ ದಿನಗಳ ಒಳಗಾಗಿ ಲಿಖಿತ ಮಾಹಿತಿ ಸಲ್ಲಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಭರತ್ ರೆಡ್ಡಿಯವರಿಗೆ ನೋಟೀಸ್ ಜಾರಿಗೊಳಿಸಿದೆ.

ದೌರ್ಜನ್ಯ ಪ್ರಕರಣದ ಕುರಿತು ಆಯೋಗವು ಜ ೭ರಂದು ನೊಟೀಸ್ ಜಾರಿಗೊಳಿಸಿದ್ದು, ೧೫ ದಿನಗಳ ಒಳಗೆ ನೋಟೀಸ್‌ಗೆ ಉತ್ತರಿಸದಿದ್ದಲ್ಲಿ ಆಯೋಗವು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಆಯೋಗದ ಅಧಿನಿಯಮದ ಮೇರೆಗೆ ತನಗೆ ಪ್ರದತ್ತವಾದ ಸಿವಿಲ್ ನ್ಯಾಯಲಯಗಳ ಅಧಿಕಾರವನ್ನು ಚಲಾಯಿಸಬಹುದು ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಿದ್ದು ಮತ್ತು ಆಯೋಗದ ಮುಂದೆ ಖುದ್ದಾಗಿ ಆತವಾ ಪ್ರತಿನಿಧಿ ಮೂಲಕ ಹಾಜರಾಗುವಂತೆ ಸಮನ್ಸ್ ಹೊರಡಿಸಿದೆ.

ಈ ಪ್ರಕರಣದ ಕುರಿತಂತೆ ಆಯೋಗಕ್ಕೆ ಸಲ್ಲಿಕೆಯಾದ ಅರ್ಜಿಯ ಕುರಿತಂತೆ ಆಯೋಗವು ವಿಚಾರಣೆಗೆ ಕೈಗೆತ್ತಿಕೊಂಡಿದೆ.


ಜಾಹೀರಾತು 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget