ಬೈಲೂರು:ಕಾರ್ಕಳ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟನೆ
ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಮನೋಹರ್ ಪ್ರಸಾದ್ ಮಾತು
ಸಂಪೂರ್ಣ ವರದಿ:ಟೈಮ್ಸ್ ಆಫ್ ಕಾರ್ಕಳ
ಕಾರ್ಕಳ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿ ನಡೆಯಿತು.
ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಾಹಿತ್ಯದ ಉಳಿವಿನ ಮೂಲಕ ಮಾನವೀಯತೆ ಉಳಿಯಬೇಕು. ಸಾಹಿತ್ಯ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕ .ಸಾಂಸ್ಕೃತಿಕ ವಿಚಾರಗಳು ಉಳಿಯಬೇಕಾದರೆ ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿಯು ಉಳಿಸಲು ಸಾಧ್ಯವಿದೆ ಎಂದು ಹೇಳಿದರು.ತಂತ್ರಜ್ಞಾನ ಬೆಳೆಯುವ ಸಂದರ್ಭದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ, ಕನ್ನಡವನ್ನು ಉಳಿಸುವ ಸಲುವಾಗಿ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬೈಲೂರಿನ ಹಿರಿಯ ವೈದ್ಯ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ಡಾ.ದಿನೇಶ್ಚಂದ್ರ ಹೆಗ್ಡೆ,ಖ್ಯಾತ ನ್ಯಾಯವಾದಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ ಕೆ ವಿಜಯ ಕುಮಾರ್ ಹಾಗೂ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಬಾಲ ಸಾಹಿತಿ ಅವನಿ ಉಪಾಧ್ಯಾಯ ಅವರ ಧಾರಿಣೀ ಪುಸ್ತಕ ಬಿಡುಗಡೆಗೊಡಿಸಲಾಯಿತು.
ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಮನೋಹರ್ ಪ್ರಸಾದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದು ನಮಗೆ ಹಿತವನ್ನು ಉಂಟುಮಾಡುತ್ತದೆಯೋ ಅದು ಸಾಹಿತ್ಯ.ಬಾಲ್ಯದ ನೆನಪುಗಳ ಉತ್ಖನನಗಳ ಅವಕಾಶವೇ ಸಾಹಿತ್ಯದ ತಿರುಳು. ಕನ್ನಡವನ್ನು ಓದುವ ಹವ್ಯಾಸ ಮಕ್ಕಳಲ್ಲಿ ಬೆಳೆಸುವ ಕೆಲಸವಾಗಬೇಕು. ಏಕಾಗ್ರತೆಯ ಕೊರತೆಯಿದ್ದು ಅದನ್ನು ಬೆಳೆಸುವ ಕೆಲಸ ಆಗಬೇಕು. ಭಾಷೆಯ ಶುದ್ದಿಯಿಲ್ಲದೇ ಭಾಷೆ ಕರಗತವಾಗಲು ಸಾಧ್ಯವಿಲ್ಲ ಎಂದರು.
ಕಾರ್ಕಳ ಸರ್ವಧರ್ಮಗಳ ನೆಲೆವೀಡು, ಮಕ್ಕಳು ಮೊಬೈಲ್ ಬದಿಗಿರಿಸಿ ಓದುವಿಕೆಯನ್ನು ಹವ್ಯಾಸವಾಗಿಸಬೇಕು ಎಂದು ಕರೆನೀಡಿದರು.ಬದುಕು ಕ್ಲಿಷ್ಟಕರವಾದಷ್ಟು ತಿಳುವಳಿಕೆ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಕೃಷಿ ಮತ್ತು ಅರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ ಸುಮಿತ್ ಶೆಟ್ಟಿ,ಕನ್ನಡ ಸಾಹಿತ್ಯ ಪರೀಚ್ಸ್ತ್ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ್ ಕೊಂಡಳ್ಳಿ,ಉದ್ಯಮಿ ಜಿ ಸುಧೀರ್ ಹೆಗ್ಡೆ ಬೈಲೂರು,ಉದ್ಯಮಿ ಸಾಂಸ್ಕೃತಿಕ ಚಿಂತಕ ಗುರ್ಮೆ ಸುರೇಶ್ ಶೆಟ್ಟಿ,ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಮಡಿವಾಳ,ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ವಾಗ್ಲೆ, ಕಾರ್ಕಳ ತಾಲೂಕು ತಹಸೀಲ್ದಾರ ಪುರಂದರ ಹೆಗ್ಡೆ,ಕಾರ್ಕಳ ಕಾರ್ಯನಿರ್ವಹಾಣಾಧಿಕಾರಿ ಮೇಜರ್ ಹರ್ಷ,ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಕಾರ್ಕಳ ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ,ತಾಲೂಕು ಪಂಚಾಯತ್ ಸದಸ್ಯೆ ನಿರ್ಮಲಾ ರಾಣೆ,ಉಡುಪಿ ಜಿಲ್ಲೆ ಕ.ಸ.ಪಾ. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಪ್ರಾಚಾರ್ಯರಾದ ಗುರುಮೂರ್ತಿ ಎನ್.ಟಿ.ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಉಪಪ್ರಾಚಾರ್ಯ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.
ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ ಶಾಂತಿನಾಥ ಜೋಗಿ ಧನ್ಯವಾದಗೈದರು.
ಜಾಹೀರಾತು
Post a comment