ಅಜೆಕಾರು: ಕಾರ್ಕಳ ತಾಲೂಕಿನ ಕಡ್ತಲ-ಸಿರಿಬೈಲಿನ ಶ್ರೀ ಬರ್ಭರೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಜನವರಿ ೨೪ ರ ಬೆಳಗ್ಗೆ ೯.೦೦ ರಿಂದ ಸಂಜೆವರೆಗೆ ಮೂರನೇ ಆದಿಗ್ರಾಮೋತ್ಸವ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಭಾಗದಲ್ಲಿ ಮೊದಲ ಸಾಹಿತ್ಯ ಸಮ್ಮೇಳನ ಇದಾಗಿದ್ದು ತ್ರಿಭಾಷಾ ಸಾಹಿತಿ ಮೌರಿಸ್ ತಾವ್ರೋ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಉದ್ಘಾಟಿಸಲಿರುವರು ಎಂದು ಸಂಘಟಕ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.
![]() |
ತ್ರಿಭಾಷಾ ಸಾಹಿತಿ ಮೌರಿಸ್ ತಾವ್ರೋ |
![]() |
ಹರಿಕೃಷ್ಣ ಪುನರೂರು |
\
![]() |
ಡಾ.ಸುಧೀರ್ ಹೆಗ್ಡೆ |
ಪತ್ರಕರ್ತರೇ ಭಾಗವಹಿಸುವ ನಮ್ಮೂರು ನಮ್ಮ ಕನಸು ಗೋಷ್ಠಿ, ೮ ನೇ ತರಗತಿಯ ವಿದ್ಯಾರ್ಥಿನಿ-ಕವಿ ಅವನಿ ಉಪಾಧ್ಯ ಉದ್ಘಾಟಿಸುವ ಕವಿಗೋಷ್ಠಿ, ೧೮ ಮಂದಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿಭೆಗಳಿಂದ ಯಕ್ಷಗಾನ, ಭರತನಾಟ್ಯ, ಸಂಗೀತ, ಭಾಷಣ, ಯೋಗ ಪ್ರದರ್ಶನ, ಬಳ್ಳಾರಿ, ಉಡುಪಿ, ದ.ಕ, ಹಾಸನ ಜಿಲ್ಲೆಗಳ ೨೬ ಮಂದಿ ಸಾಧನಶೀಲರನ್ನು ರಾಜ್ಯಮಟ್ಟದ ಆದಿಗ್ರಾಮೋತ್ಸವ ಗ್ರಾಮ ಗೌರವ ನೀಡಿ ಸತ್ಕರಿಸುವುದು, ೪ ಸಾಧಕ ಸಂಸ್ಥೆಗಳ ಗೌರವ ಈ ಸಮ್ಮೇಳನದ ವಿಶೇಷತೆಯಾಗಿದೆ.
ಆದಿಗ್ರಾಮೋತ್ಸವ ಸಮಿತಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಲಯನ್ಸ್ ಕ್ಲಬ್ ಮುನಿಯಾಲು, ಶ್ರೀ ದುರ್ಗಾಪರಮೇಶ್ವರೀ ಭಜನಾ ಮಡಳಿಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದ ಸಮಾರೋಪ ಆಶಯ ಭಾಷಣವನ್ನು ಸಮನ್ವಯ ವಾಗ್ಮಿ ಮುನಿರಾಜ ರೆಂಜಾಳ ಅವರು ನೆರವೇರಿಸುವರು.
![]() |
ಮಹಮ್ಮದ್ ಗೌಸ್ |
ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಎಳ್ಳಾರೆ ಮತ್ತು ಕ್ಯಾಪ್ಟನ್ ಗಣೇಶ ಕಾರ್ಣಿಕ್ ಪ್ರಶಸ್ತಿ ಪ್ರದಾನಿಸುವರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಸುಮತಿ. ಪಿ ಅಂಡಾರು ವಹಿಸುವರು. ಧನಂಜಯ ಮೂಡುಬಿದಿರೆ ಅಧ್ಯಕ್ಷತೆಯಲ್ಲಿ ’ನಮ್ಮೂರು ನಮ್ಮ ಕನಸು’ ಗೋಷ್ಠಿ, ಶೇಖರ ಕಡ್ತಲ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ, ಡಾ.ಶೇಖರ ಅಜೆಕಾರು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಶಬರೀಶ ಆಚಾರ್ಯ ಅವರ ಯಕ್ಷ ನಾಟ್ಯ, ಪ್ರಣಮ್ಯ ಅಗಲಿ ಅವರ ಯೋಗ ಪ್ರದರ್ಶನ, ಶೀಲಾ ಪಡೀಲ್ ಮತ್ತು ಶೈಲಜಾ ಕಾರ್ಕಳ ಅವರಿಂದ ಕನ್ನಡ ಗೀತಗಾಯನ ಇದೆ. ೨ ವರ್ಷದ ಮಗು ಸಾನ್ನಿಧ್ಯ ಕವತ್ತಾರು ಗೀತೆಗಳ ಮೂಲಕ ರಂಗಪ್ರವೇಶ ಮಾಡುವರು. ಸಾಹಿತ್ಯ- ಸಂಸ್ಕೃತಿ- ಕಲಾ ಪ್ರದರ್ಶನದ ವೇದಿಕೆ ಇದಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಹಿ ಬೇಕೆಂದು ಸಂಘಟಕರು ವಿಂತಿಸಿದ್ದಾರೆ.
ಬೆಳಗ್ಗೆ ೯.೦೦ ರಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರ ಮತ್ತು ಸಂಜೆ ಸಮಾರೋಪದ ಬಳಿಕ ಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿಯವರಿಂದ ಚಿತ್ತಾಕರ್ಷವಾದ ಭಕ್ತಿ ಗಾನ ಸುಧೆ ಕಾರ್ಯಕ್ರಮವಿದೆ. ಇಡೀ ದಿನ ಸಾಹಿತ್ಯ- ಸಂಗೀತ- ಸಂಸ್ಕೃತಿ ಸಂಭ್ರಮ ನಡೆಯಲಿದೆ.
ಜಾಹೀರಾತು
Post a comment