ಹೆಬ್ರಿ ಸಮೀಪದ ಕಡ್ತಲ ಸಿರಿಬೈಲು ಬರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಮೂರನೇ ಆದಿ ಗ್ರಾಮೋತ್ಸವ - ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ತ್ರಿಭಾಷಾ ಸಾಹಿತಿ ಅಜೆಕಾರು ಮೌರೀಸ್ ತಾವ್ರೋ ಅವರ ಕವನ ಸಂಕಲನ ಕವಿತಾ ಕಿರಣವನ್ನು ನಿವೃತ್ತ ವಿದ್ಯಾಂಗ ಪರಿವೀಕ್ಷಕ ಕಡ್ತಲ ಅಡಂದಾಲು ಕರುಣಾಕರ ಹೆಗ್ಡೆ ಬಿಡುಗಡೆಗೊಳಿಸಿದರು.
![]() |
ಗ್ರಾಮ ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷೆ ಅಜೆಕಾರು ಪ್ರೇಮಾ ವಿ.ಸೂರಿಗ ಅವರನ್ನು ಗೌರವಿಸಲಾಯಿತು. |
ಹೆಬ್ರಿ : ನಮ್ಮ ಭಾಷೆ ಯಾವುದಾದರೂ ಇತರ ಭಾಷೆಗಳನ್ನು ಕೂಡ ನಾವು ಗೌರವಿಸಬೇಕು, ಸಮಾಜದಲ್ಲಿ ಒಟ್ಟಾಗಿ ಅವರೊಡನೆ ಜೀವಿಸುತ್ತಿರುವ ನಾವು ಅವರ ಭಾಷೆ ಆಚಾರ ವಿಚಾರಗಳಿಗಾಗಿ ಕೀಳಾಗಿ ನೋಡುವುದು ಸಲ್ಲದು, ಪೇಟೆ ಪಟ್ಟಣದ ಕೆಲವು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಮಕ್ಕೊಳಡನೆ ಬೆರೆಯದಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಇದು ಸರಿಯಲ್ಲ, ಸಂಘಜೀವಿಯಾದ ಮನುಷ್ಯ ಸಮಾಜವನ್ನು ಬಿಟ್ಟು ಬದುಕಲಾರ, ತನ್ನಲಿಲ್ಲದ ವಸ್ತುಗಳಿಗಾಗಿ ನಾವು ಬೇರೆಡೆ ಹೋಗಲೇಬೇಕು ಎಂದು ಸಿರಿಬೈಲು ಗ್ರಾಮ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ತ್ರಿಭಾಷಾ ಸಾಹಿತಿ ಅಜೆಕಾರು ಮೌರೀಸ್ ತಾವ್ರೋ ಅಭಿಪ್ರಾಯ ಪಟ್ಟರು.
ಆದಿಗ್ರಾಮೋತ್ಸವ ಸಮಿತಿ ಅರ್ಪಿಸುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಘಟಕ, ಲಯನ್ಸ್ ಕ್ಲಬ್ ಮುನಿಯಾಲು ಹಾಗೂ ಸಿರಿಬೈಲು ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸಹಕಾರದಲ್ಲಿ ೩ನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನ ನಡೆಯಿತು.
![]() |
ಕವಿ ಸಾಹಿತಿ ಶೇಖರ ಅಜೆಕಾರು ವಿಶೇಷ ಪರಿಶ್ರಮದ ಮೂಲಕ ನಿರಂತರವಾಗಿ ಕನ್ನಡ ಕಟ್ಟುವ ಕೆಲಸ ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದಾರೆ. ಸಾಹಿತ್ಯ ಪ್ರಕಾಶನ, ಸಂಘಟನೆ, ತುಳು ಸೇವೆ ಹೀಗೆ ಬಹುಮುಖದ ಸೇವೆಯಲ್ಲಿ ನಿರತರಾಗಿದ್ದಾರೆ. ಕನ್ನಡಕ್ಕಾಗಿ ದುಡಿದ ದುಡಿಯುತ್ತಿರುವ ಅವರಿಗೆ ಕನ್ನಡದ ಕಣ್ಮಣಿ ಗೌರವ ಸೂಕ್ತ ಎಂದು ಮೌರೀಸ್ ತಾವ್ರೋ ಸಂಘಟಕ ಶೇಖರ ಅಜೆಕಾರು ಅವರನ್ನು ಅಭಿನಂದಿಸಿದರು.
ಲಂಚ ಕೊಲೆ ಸುಲಿಗೆ ಮೋಸ ಅತ್ಯಾಚಾರ ಸಮಾಜದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ, ಇದನ್ನು ಮಾಡುವವರು ವಿದ್ಯಾವಂತರೇ ಎನ್ನುವುದು ವಿಪರ್ಯಾಸ, ಕಾನೂನಿನಿಂದಲೇ ನಿಯಂತ್ರಣ ಅಸಾಧ್ಯ, ಯುವಕರು ದಾರಿ ತಪ್ಪುವುದನ್ನು ತಪ್ಪಿಸುವ ಹೊಣೆ ಪೋಷಕರ ಜೊತೆಗೆ ಸಮಾಜದ್ದು ಆಗಿದೆ ಎಂದರು.
ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪೋಷಕರು ಮೊಬೈಲ್ ಸೈಕಲ್ ಟ್ಯಾಬ್ ಸಹಿತ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಅದರಿಂದ ಮಕ್ಕಳಿಗೆ ಹೆತ್ತವರ ಮೇಲಿನ ಪ್ರೇಮ ಆ ವಸ್ತುಗಳು ಮೇಲೆ ಬೀಳುತ್ತದೆ. ಮಕ್ಕಳಿಗೆ ಪೋಷಕರ ಮೇಲಿನ ಪ್ರೀತಿ ಕಡಿಮೆಯಾಗಲು ಇದು ಕೂಡ ಒಂದು ಕಾರಣ ಎಂದು ಹೇಳಿದ ಮೌರಿಸ್ ತಾವ್ರೋ ಮಕ್ಕಳಿಗೆ ಪುಸ್ತಕ, ಪತ್ರಿಕೆ, ಮಕ್ಕಳ ಪತ್ರಿಕೆ ಕೊಡಿಸಿ ಎಂದರೆ ಮಕ್ಕಳು ಪಾಠ ಮನೆಪಾಠ ಟ್ಯೂಷನ್ ಮುಗಿಸುವುದು ಯಾವಾಗ ಎಂದು ರಾಗ ಎಳೆಯುತ್ತಾರೆ ಇದೇ ದೊಡ್ಡ ದುರಂತ ಎಂದು ಅವರು ಖೇದ ವ್ಯಕ್ತಪಡಿಸಿದರು. ನಮ್ಮ ನಡಿಗೆ ತ್ಯಾಜ್ಯ ಮುಕ್ತದ ಕಡೆಗೆ - ಸ್ವಚ್ಚ ಭಾರತ ಘೋಷಣೆಯನ್ನು ಕೇಳುತ್ತಿದ್ದೇವೆ. ಎಲ್ಲರಿಗು ಘೋಷಣೆ ಕೇಳಿ ಹಾಕಿ ಗೊತ್ತು. ಆದರೆ ನಮ್ಮ ಮನೆಯ ಕಸವನ್ನು ರಸ್ತೆಯ ಬದಿಗೆ, ಎಲ್ಲೆಂದರಲ್ಲಿ ಹಾಕುವುದು ಸರಿಯೇ ಎಂದು ಸಮ್ಮೇಳನಾಧ್ಯಕ್ಷ ಮೌರಿಸ್ ತಾವ್ರೋ ಪ್ರಶ್ನಿಸಿದರು.
ನಾವು ನಿರಂತರವಾಗಿ ಓದುವುದರಿಂದ ನಮ್ಮ ಜ್ಞಾನದ ವೃದ್ಧಿಯಾಗಿ ಸಾಹಿತ್ಯ ಕವನ ಬರೆಯುವ ಪ್ರೇರಣೆ ಸಿಗುತ್ತದೆ, ಯುವ ಸಮುದಾಯ ಒದುವ ಆಸಕ್ತಿ ಹೆಚ್ಚಿಸಿ ಸಾಹಿತ್ಯದ ಕಡೆಗೆ ಒಲವು ತೋರಿಸಬೇಕು, ನಮ್ಮೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಸೌಭಾಗ್ಯ ಎಂದು ಸಂಘಟಕ ಶೇಖರ ಅಜೆಕಾರು ಮತ್ತವರ ತಂಡವನ್ನು ನಿವೃತ್ತ ವಿದ್ಯಾಂಗ ಪರಿವೀಕ್ಷಕ ಕಡ್ತಲ ಅಡಂದಾಲು ಕರುಣಾಕರ ಹೆಗ್ಡೆ ಅಭಿನಂದಿಸಿದರು.
ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ತ್ರಿಭಾಷಾ ಸಾಹಿತಿ ಅಜೆಕಾರು ಮೌರೀಸ್ ತಾವ್ರೋ ಅವರ ಕವನ ಸಂಕಲನ ಕವಿತಾ ಕಿರಣವನ್ನು ನಿವೃತ್ತ ವಿದ್ಯಾಂಗ ಪರಿವೀಕ್ಷಕ ಕಡ್ತಲ ಅಡಂದಾಲು ಕರುಣಾಕರ ಹೆಗ್ಡೆ ಬಿಡುಗಡೆಗೊಳಿಸಿದರು. ಗ್ರಾಮ ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷೆ ಅಜೆಕಾರು ಪ್ರೇಮಾ ವಿ.ಸೂರಿಗ ಅವರನ್ನು ಗೌರವಿಸಲಾಯಿತು. ಅಜೆಕಾರಿನಲ್ಲಿ ಸಮ್ಮೇಳನಾಧ್ಯಕ್ಷರಾದ ಮೌರಿಸ್ ತಾವ್ರೋ ಅವರನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಸ್ವಾಗತಿಸಿ ಗೌರವಿಸಿದರು. ವಿವಿಧ ಕಾರ್ಯಕ್ರಮಗಳು ನಡೆಯಿತು. ಹಿರಿಯ ಪತ್ರಕರ್ತ ಧನಂಜಯ ಮೂಡಬಿದರೆ ಅಧ್ಯಕ್ಷತೆಯಲ್ಲಿ ನಮ್ಮೂರು ನಮ್ಮ ಕನಸು ವಿಚಾರ ಗೋಷ್ಠಿ ನಡೆಯಿತು. ಪತ್ರಕರ್ತರಾದ ಜಗದೀಶ್ ಆರ್,ಬಿ, ಬಾಲಕೃಷ್ಣ ಭೀಮನಗುಳಿ, ಜಗದೀಶ್ ಅಂಡಾರು, ನರೇಂದ್ರ ಎಸ್ ಹೆಬ್ರಿ, ಪದ್ಮಶ್ರೀ ನಿಡ್ಡೋಡಿ, ರಾಮ ಅಜೆಕಾರು ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಯೋಗ ಶಿಕ್ಷಕ ಶೇಖರ್ ಕಡ್ತಲ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಪತ್ನಿ ಲಿಲ್ಲಿ ತಾವ್ರೋ,ಕಾರ್ಕಳ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್ ಉಪಸ್ಥಿತರಿದ್ದದರು. ಸಾಹಿತ್ಯ ಸಮ್ಮೇಳನದ ಸಂಘಟಕರಾದ ಸಾಹಿತಿ ಶೇಖರ ಅಜೆಕಾರು ನಿರೂಪಿಸಿ ರಾಘವೇಂದ್ರ ಮಠದಬೆಟ್ಟು ಸ್ವಾಗತಿಸಿ ಶಿಕ್ಷಕ ದೀಪಕ್ ದುರ್ಗಾ ನಿರೂಪಿಸಿದರು.
ಜಾಹೀರಾತು
Post a comment