ಮುನಿಯಾಲು:ಮುನಿಯಾಲಿನ ಸಂಜೀವಿನಿ ಫಾರ್ಮುನಲ್ಲಿ ಭಾನುವಾರ ನಡೆದ ಹೆಬ್ರಿಯ ಹೆಬ್ಬೇರಿ ಬೈಸಿಕಲ್ ಆರ್ಗನೈಸೇಶನ್ ಆಪ್ ಇಂಡಿಯಾ-ಹೆಬ್ರಾಯ್ ಸಂಸ್ಥೆಯ ಎರಡನೆ ವರ್ಷದ ಪ್ರಥಮ ಸಭೆಯಲ್ಲಿ ಗೌರವಾಧ್ಯಕ್ಷ ಡಾ.ರಾಮಚಂದ್ರ ಐತಾಳ್ಮಾತನಾಡಿದರು.
ಹೆಬ್ರಿಯ ಹೆಬ್ಬೇರಿ ಬೈಸಿಕಲ್ಆರ್ಗನೈಸೇಶನ್ಆಪ್ಇಂಡಿಯಾ-ಹೆಬ್ರಾಯ್ಸಂಸ್ಥೆಯ ಎರಡನೇ ವರ್ಷದ ಪ್ರಥಮ ಸಭೆಯು ಮೂಡಬಿದಿರೆ ಎಸ್ಕೆಎಫ್ಉದ್ಯಮ ಸಮೂಹ ಸಂಸ್ಥೆಯ ಮುನಿಯಾಲು ಸಂಜೀವಿನಿ ಫಾರ್ಮುನಲ್ಲಿ ಭಾನುವಾರ ನಡೆಯಿತು.
ಫಾರ್ಮುನ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್ಯ ದೇಶದ ಅಪರೂಪದ ಗೋತಳಿಗಳ ಸಂರಕ್ಷಣೆಯ ಜೊತೆಗೆ ಯುವ ಸಮುದಾಯ ವಿದೇಶ, ಹೊರರಾಜ್ಯಗಳ ಕನಸು ಬಿಟ್ಟು ನಮ್ಮ ಊರಲ್ಲೇ ನಾವು ಸ್ವಉದ್ಯೋಗದ ಮೂಲಕ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಮುನಿಯಾಲು ಸಂಜೀವಿನಿ ಫಾರ್ಮುನ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್, ಕಾರ್ಯದರ್ಶಿ ಸವಿತಾ ಆರ್. ಆಚಾರ್ ಅವರನ್ನು ಗೌರವಿಸಿದರು. ಹೆಬ್ರಿಯ ಹೆಬ್ಬೇರಿ ಬೈಸಿಕಲ್ಆರ್ಗನೈಸೇಶನ್ಆಪ್ಇಂಡಿಯಾ-ಹೆಬ್ರಾಯ್ಸಂಸ್ಥೆಯ ನೂತನ ಅಧ್ಯಕ್ಷ ಎಚ್. ದಿನಕರ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಬ್ರಾಯ್ಸಂಸ್ಥೆಯ ಉದ್ದೇಶವನ್ನು ವಿವರಿಸಿ ಅಪರೂಪದ ಗೋತಳಿಗಳ ಸಂಜೀವಿನಿ ಫಾರ್ಮು ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಲಯನ್ಸ್ಕ್ಲಬ್ಜಿಲ್ಲಾ ಸಂಪುಟ ಕಾರ್ಯದರ್ಶಿ ಹೆಬ್ರಿ ಟಿ.ಜಿ.ಆಚಾರ್ಯ, ಹೆಬ್ರಿ ಸಿಟಿ ಲಯನ್ಸ್ಕ್ಲಬ್ಅಧ್ಯಕ್ಷೆ ಡಾ.ಭಾರ್ಗವಿ ಆರ್. ಐತಾಳ್, ಪೂರ್ವಾಧ್ಯಕ್ಷ ಹೆಬ್ರಿ ರಮೇಶ್ಆಚಾರ್ಯ, ಹೆಬ್ರಾಯ್ಸಂಸ್ಥೆಯ ಗೌರವಾಧ್ಯಕ್ಷ ಡಾ.ರಾಮಚಂದ್ರ ಐತಾಳ್, ಉಪಾಧ್ಯಕ್ಷ ಎಚ್. ದಿನೇಶ್ಶೆಟ್ಟಿ, ಹೆಬ್ರಾಯ್ಸದಸ್ಯರು,ಸಂಜೀವಿನಿ ಫಾರ್ಮುನ ರಕ್ಷತ್ಆಚಾರ್ಯ, ಪತ್ರಕರ್ತ ಸುಕುಮಾರ್ಮುನಿಯಾಲ್ ಭಾಗವಹಿಸಿದ್ದರು.
ಜಾಹೀರಾತು
Post a comment