ಕಾರ್ಕಳ:ಬೀಗ ಮುರಿದು ಮನೆಗೆ ನುಗ್ಗಿದ ಕಳ್ಳರು:3,28,000/- ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು-Times of karkala

ಕಾರ್ಕಳ:ಮನೆಗೆ ನುಗ್ಗಿ  ಚಿನ್ನಾಭರಣ ಕಳವುಗೈದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಬಳಿ ನಡೆದಿದೆ.

ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಹರಿಕೃಷ್ಣ ನೆಲ್ಲಿ ಎಂಬುವವರ ವಾಸ್ತವ್ಯದ  ಮನೆಗೆ ಕಳೆದ ಎರಡು ದಿನಗಳ ಅಂತರದಲ್ಲಿ ( ದಿನಾಂಕ 17/01/2021 ರಂದು ಸಂಜೆ 5:00 ಗಂಟೆಯಿಂದ ದಿನಾಂಕ 18/01/2021 ರಂದು ಮಧ್ಯಾಹ್ನ 3:30 ಗಂಟೆಯ ಮಧ್ಯೆ) ಮನೆಯ ಮುಂದಿನ ಬಾಗಿಲಿನ ಬೀಗವನ್ನು ಮುರಿದು ಮನೆಯ ಒಳ ಪ್ರವೇಶಿಸಿ ಬೆಡ್‌ರೂಮ್‌ನ ಗೋದ್ರೇಜ್ ಕಪಾಟು ಮತ್ತು ವಾಲ್ಡೋಸ್ ಕಪಾಟಿನಲ್ಲಿರಿಸಿದ್ದ  ಪತ್ನಿ ಹಾಗೂ ಮಗಳ  82 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ.


ಇವುಗಳ ಒಟ್ಟು ಮೌಲ್ಯ  3,28,000/- ರೂಪಾಯಿ ಆಗಿದ್ದು  ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ 

ಕಾರ್ಕಳ: ದಿನಾಂಕ 17/01/2021 ರಂದು ಸಂಜೆ 5:00 ಗಂಟೆಯಿಂದ ದಿನಾಂಕ 18/01/2021 ರಂದು ಮಧ್ಯಾಹ್ನ 3:30 ಗಂಟೆಯ ಮಧ್ಯೆ ಕಾರ್ಕಳ ಪಿರ್ಯಾದಿದಾರರಾದ ಹರಿಕೃಷ್ಣ ನೆಲ್ಲಿ (40), ತಂದೆ: ರಘುರಾಮ ವಾಸ: ನೆಲ್ಲಿಕಟ್ಟೆ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರ ವಾಸ್ತವ್ಯದ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ ಬೆಡ್‌ರೂಮ್‌ನ ಗೋದ್ರೇಜ್ ಕಪಾಟು ಮತ್ತು ವಾಲ್ಡೋಸ್ ಕಪಾಟಿನಲ್ಲಿರಿಸಿದ್ದ ಪಿರ್ಯಾದಿದಾರರ ಪತ್ನಿ ಹಾಗೂ ಮಗಳ  82 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು,  ಮೌಲ್ಯ 3,28,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಜಾಹೀರಾತು 










Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget