ಹಿರಿಯ ಸಾಹಿತಿ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅವರ 410ನೇ ಕೃತಿ ಜಯಭಾರತ ಮಹಾಕಾವ್ಯ ದೇವಾರ್ಪಣೆ-Times of karkalaಹೆಬ್ರಿ : ಲೇಖಕ ಯಶಸ್ಸನ್ನು ಪಡೆಯಬೇಕಾದರೆ ಓದುಗ ಮುಖ್ಯ .ಅಂತಹ ಓದುಗರ ಸಹಕಾರ ಮತ್ತು ನನ್ನನ್ನು ಬೆಳೆಸಿದ ಹೆಬ್ರಿಯನ್ನು ಎಂದು ಮರೆಯಲಾಗದು ಎಂದು ನಾಡಿನ ಹಿರಿಯ ಸಾಹಿತಿ ಮಂಡ್ಯದಲ್ಲಿರುವ ಹೆಬ್ರಿ ಮೂಲದ ಡಾ.ಪ್ರದೀಪ್ ಕುಮಾರ್ ಹೆಬ್ರಿ ಹೇಳಿದರು.

ಅವರು ಹೆಬ್ರಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಇತ್ತೀಚೆಗೆ ಅವರ ೪೧೦ನೇ ಕೃತಿ  ಜಯಭಾರತ ಮಹಾಕಾವ್ಯವನ್ನು ದೇವಾರ್ಪಣೆ ಮಾಡಿ ಅಭಿಮಾನಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಜಯಭಾರತ ಕಾವ್ಯ ಮನುಷ್ಯ ಧರ್ಮ ಏನು ಹೇಳುತ್ತದೆ ಮತ್ತು ಬದುಕಿನ ಸಾರ್ಥಕತೆಯ ಕುರಿತು ರಚನೆಯಾಗಿದೆ.ಇದು ೪ ಸಂಪುಟಗಳಲ್ಲಿದ್ದು ೧೮೦೦ ಪುಟಗಳನ್ನು ಹೊಂದಿದೆ ಎಂದು ಡಾ.ಪ್ರದೀಪ್‌ ಕುಮಾರ್‌ ಹೇಳಿದರು. 

೪೧೦ ಕೃತಿಗಳು : ಸುಮಾರು ೩೧ ವರ್ಷದ ಸಾಹಿತ್ಯದ ನಡಿಗೆಯಲ್ಲಿ ೪೧೦ ಕೃತಿಗಳು ಬಿಡುಗಡೆಯಾಗಿದೆ.ಅವುಗಳಲ್ಲಿ   ೧೩ ಮಹಾಕಾವ್ಯಗಳ ಪೈಕಿ  ೫ಸಾವಿರ ಪುಟಗಳ ಯುಗಾವತಾರಿ ಮಹಾಕಾವ್ಯ  ಭಾರತೀಯ ಭಾಷೆಗಳಲ್ಲಿ ಅತೀ ದೊಡ್ಡ ಕಾವ್ಯವಾಗಿ  ಪ್ರಸಿದ್ಧಿಯನ್ನು ಪಡೆಯಿತು.ಮುಂದಿನ ವರ್ಷ ಭಗವದ್ಗೀತೆಯ ಬಗ್ಗೆ ಮಹಾಕಾವ್ಯ ರಚನೆಯಾಗಲಿದೆ ಎಂದು ಡಾ. ಪ್ರದೀಪ್‌ ಕುಮಾರ್‌ ತಿಳಿಸಿದರು.  ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಎಚ್. ಯೋಗೀಶ್ ಭಟ್ ಮಾತನಾಡಿ ಡಾ. ಪ್ರದೀಪ್‌ ಕುಮಾರ್‌ ಹೆಬ್ರಿಯವರು ಹೆಬ್ರಿಯ ಹೆಮ್ಮೆ.ಇವರ ಕಾವ್ಯಗಳು ದೇಶದಾದ್ಯಂತ ಪ್ರಸಿದ್ಧಿ ಪಡೆದರೂ ಅವರಲ್ಲಿರುವ ಸರಳತೆ ಮತ್ತು ಮಾನವೀಯ ಮೌಲ್ಯ ಅವರನ್ನು  ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರು.  ಮಂಡ್ಯ ಪ್ರೆಸ್‌ನ ಶಿವಪ್ರಕಾಶ್ ,ಹೆಬ್ರಿಯ ಬಾಲಕೃಷ್ಣ ಮಲ್ಯ, ಸಾಹಿತ್ಯಪ್ರೇಮಿ ಭಾಸ್ಕರ್ ಜೋಯಿಸ್,ವೆಂಕಟೇಶ್ ನಾಯಕ್,ರಾಮಕೃಷ್ಣ ಆಚಾರ್ಯ,ಸೀತಾನದಿ ವಿಠಲ ಶೆಟ್ಟಿ ಇದ್ದರು.

ಜಾಹೀರಾತು    
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget