ಸಾಣೂರು:ಯುವಕ ಮಂಡಲದ 67ನೇ ವಾರ್ಷಿಕೋತ್ಸವ ಆಮಂತ್ರಣ ಪತ್ರ ಬಿಡುಗಡೆ-Times of karkala

ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ  ಮಂಡಲ (ರಿ.) ಸಾಣೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ, ಕರ್ನಾಟಕ  ಸಂಘ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಇದರ ಅಂಗ ಸಂಸ್ಥೆ  ಶ್ರೀವಾಣಿ ಯಕ್ಷಗಾನ ಸಭಾ ಇದರ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ ಯುವಕ  ಮಂಡಲದ 67ನೇ  ವಾರ್ಷಿಕೋತ್ಸವ ಸಂಭ್ರಮ ದ  ಆಮಂತ್ರಣ ಪತ್ರ ಬಿಡುಗಡೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೆಂದಬೆಟ್ಟು ಇಲ್ಲಿನ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಮ್ ಭಟ್ ಬಿಡುಗಡೆಗೊಳಿಸಿ  ಶುಭ ಹಾರೈಸಿದರು.

ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ  ಶ್ಯಾಮ್ ಶೆಟ್ಟಿ ಸಾಣೂರು ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಓಂಕಾರ್ ದಾನಿಗಳಾದ   ದೀಪಕ್ ಬಾಳಿಗ ಹಿರಿಯಣ್ಣ ಸುವರ್ಣ ಮಂಡಲದ ಅಧ್ಯಕ್ಷರಾದ  ಪ್ರಸಾದ್ ಪೂಜಾರಿ  ಉಪಾಧ್ಯಕ್ಷ  ಪ್ರಸಾದ್ ಶೆಟ್ಟಿ ಕಾರ್ಯದರ್ಶಿ ಮೋಹನ್ ಶೆಟ್ಟಿ ಜೊತೆ ಕಾರ್ಯದರ್ಶಿ  ಪ್ರಕಾಶ್ ರಾವ್ ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಶೆಟ್ಟಿ  ದೇವಾನಂದ್ ಶೆಟ್ಟಿ  ಜಗದೀಶ್ ಕುಮಾರ್   ಶಂಕರ್ ಶೆಟ್ಟಿ  ಪ್ರಕಾಶ್ ಮಡಿವಾಳ ಕೋಶಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಮತ್ತು ವಾರ್ಷಿಕೋತ್ಸವ ಸಂಭ್ರಮವು  ಜನವರಿ 22/23/24 ಮೂರು ದಿನಗಳ ಕಾಲ ಜರುಗಲಿದೆ.






ಜಾಹೀರಾತು 

  



 




Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget