ಕಾರ್ಕಳ:ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಹಣಾಹಣಿ: ಕಣದಲ್ಲಿ ಯಾರೆಲ್ಲಾ ಇದ್ದಾರೆ? ಅಭ್ಯರ್ಥಿಗಳು ಏನು ಹೇಳುತ್ತಾರೆ? ಟೈಮ್ಸ್ ಆಫ್ ಕಾರ್ಕಳ ವಿಶೇಷ ವರದಿ

►►ಕಾರ್ಕಳ:ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಹಣಾಹಣಿ: 

►►ಕಣದಲ್ಲಿ ಯಾರೆಲ್ಲಾ ಇದ್ದಾರೆ? 

►►ಅಭ್ಯರ್ಥಿಗಳು ಏನು ಹೇಳುತ್ತಾರೆ? 

►►ಟೈಮ್ಸ್ ಆಫ್ ಕಾರ್ಕಳ ವಿಶೇಷ ವರದಿ. ಕಾರ್ಕಳ:ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಆಂತರಿಕ ಚುನಾವಣೆ ಪೈಪೋಟಿ ತೀವ್ರಗೊಂಡಿದೆ. ಪಟ್ಟಕ್ಕಾಗಿ ಮೂವರಲ್ಲಿ ಪೈಪೋಟಿ ನಡೆಯುತ್ತಿದ್ದು ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುವುದು ಕುತೂಹಲ ಕೆರಳಿಸಿದೆ.


ಸುಹಾಸ್ ಕಾವ


ಕಾರ್ಕಳ ಬ್ಲಾಕ್  ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ  ನಡೆಯಲಿರುವ ಚುನಾವಣೆಗೆ ಡಿಸೆಂಬರ್‌ 31 ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು.ಜನವರಿ 12 ಚುನಾವಣೆ ನಡೆಯಲಿದೆ. ಕೋವಿಡ್‌ ಕಾರಣಕ್ಕಾಗಿ ಈ ಬಾರಿ ಆನ್‌ಲೈನ್‌ನಲ್ಲಿ ಮತದಾನ ನಡೆಯಲಿದೆ.ಕಾರ್ಕಳದಲ್ಲಿರುವ  ಇರುವ ಒಟ್ಟು 1100 ಸದಸ್ಯರು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ತಮ್ಮ ಅಧ್ಯಕ್ಷನನ್ನು ಆಯ್ಕೆ ಮಾಡಲಿದ್ದಾರೆ.

 ಯೋಗೀಶ್ ನಯನ್ ಇನ್ನ

ಬ್ಲಾಕ್  ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಸದ್ಯ ಕಣದಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಯೋಗೀಶ್ ನಯನ್ ಇನ್ನ,ಜಿಲ್ಲಾ ಇಂಟಕ್ ಉಪಾಧ್ಯಕ್ಷರಾಗಿದ್ದ ಸುಹಾಸ್ ಕಾವ,ಹಾಗೂ ಕಾಂತಾವರ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತ ಪ್ರದೀಪ್ ಬೇಲಾಡಿ ಹೆಸರು ಮುಂಚೂಣಿಯಲ್ಲಿದೆ. 


ಕೃಷ್ಣ ಶೆಟ್ಟಿ

ಈ ಪೈಕಿ ಯೋಗೀಶ್ ನಯನ್ ಇನ್ನ ಹಾಗೂ ಸುಹಾಸ್  ಕಾವ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಪ್ರದೀಪ್ ಬೇಲಾಡಿ ಇತ್ತೀಚೆಗೆ ಸಂಘಪರಿವಾರದಿಂದ ಹೊರಬಂದು ಕಾಂಗ್ರೆಸ್ ಸೇರಿದವರು.ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ  ಪಂಚಾಯತ್ ಚುನಾವಣೆಯೆದುರಿಸಿ ಕೆಲವೇ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದವರು. 

ಪ್ರದೀಪ್ ಬೇಲಾಡಿ

ಹಾಗೆಯೆ ಕಾಂಗ್ರೆಸ್ ನಲ್ಲಿ  ಕಳೆದ ಬಾರಿ ಕಾರ್ಕಳ ಬ್ಲಾಕ್  ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ ಕೃಷ್ಣ ಶೆಟ್ಟಿ, ಈ ಭಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೊನೆಯವರೆಗೆ ಕೇಳಿಬಂದಿದ್ದರೂ ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸದೆ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಗೆ ನಾಮ ಪಾತ್ರ ಸಲ್ಲಿಸಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಿನ್ನ್ನಾಭಿಪ್ರಾಯವಿತ್ತೇ ಎಂಬ ಪ್ರಶ್ನೆಗಳನ್ನು ಮೂಡಿಸಿದೆ.


"ಯೂತ್ ಕಾಂಗ್ರೆಸ್ ಸದಸ್ಯತ್ವದ ಜೊತೆಗೆ ಪಕ್ಷದ ಸಂಘಟನೆಯನ್ನು ಮಾಡಿಕೊಂಡು ಬಂದಿದ್ದೇನೆ.ಚುನಾವಣಾ ಪ್ರಕ್ರಿಯೆಗೆ ಹಿರಿಯ ನಾಯಕರು ಕೈಜೋಡಿಸಿದ್ದಾರೆ.  ಕಾಂಗ್ರೆಸ್‌ ಪಕ್ಷ ಯುವಕರಿಗೆ ಸಾಕಷ್ಟು ಅವಕಾಶ ನೀಡುತ್ತಿದೆ.ಈ ನಿಟ್ಟಿನಲ್ಲಿ ಸೂಕ್ತ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ನಾನು ದುಡಿದದ್ದು ಪಕ್ಷದ ಹಿರಿಯರು ನನ್ನನು ಗುರುತಿಸುತ್ತಾರೆಯೆಂಬ ನಂಬಿಕೆ ಇದೆ.ಸೋಲು,ಗೆಲುವು ಅಥವಾ ಅಧಿಕಾರಕ್ಕಾಗಿ ಚುನಾವಣೆಗಾಗಿ ಸ್ಪರ್ಧಿಸುತ್ತಿಲ್ಲ.ಗೆದ್ದರೆ ಯುವಕರನ್ನು ಸಂಘಟಿಸಿಕೊಂಡು ಪಕ್ಷ ಸಂಘಟನೆ ಮಾಡುವುದು ನನ್ನ ಮೊದಲ ಆದ್ಯತೆ"-ಸುಹಾಸ್ ಕಾವ 

"ಹಲವು ವರ್ಷಗಳಿಂದ ಪಕ್ಷಕ್ಕಾಗಿ ಶೃದ್ದೆ‌ ಮತ್ತು ನಿಷ್ಠೆಯಿಂದ ಯಾವುದೇ‌ ಫಲಾಪೇಕ್ಷೆ ಇಲ್ಲದೆ ದುಡಿಯುತ್ತಾ ಬಂದಿದ್ದು ಅದನ್ನು ಗುರುತಿಸಿದ ಪಕ್ಷದ ನಾಯಕರುಗಳು ನನಗೆ ನೀಡಿದ ಸಾಮಾಜಿಕ ಜಾಲಾತಾಣದ ಜಿಲ್ಲಾದ್ಯಕ್ಷನ ಜವಾಬ್ದಾರಿಯನ್ನು ಕರ್ತವ್ಯ ಎಂದು ತಿಳಿದು ಪಕ್ಷದ ಚಟುವಟಿಕೆಯಲ್ಲಿ ಸಂಪೂರ್ಣ ನನ್ನನ್ನು ತೊಡಗಿಸಿಕೊಂಡು ಸೇವೆಯನ್ನು ಸಲ್ಲಿಸುತ್ತಿದ್ದೇನೆ. ನಮ್ಮ ಪಕ್ಷದ ತತ್ವ ‌ಸಿದ್ದಾಂತವನ್ನು ಎತ್ತಿ ಹಿಡಿದು ವಿರೋದಿಗಳ ಅಪಪ್ರಚಾರಕ್ಕೆ ಸರಿಯಾದ ಉತ್ತರ ನೀಡಿ ಸಾಮಾಜಿಕ ಜಾಲತಾಣವನ್ನು ಬಲಪಡಿಸುವಲ್ಲಿ ಸತತ ಪ್ರಯತ್ನಪಟ್ಟಿರುತ್ತೇನೆ. ಸಿಮೆಂಟ್ ಹಗರಣದ ವಿಷಯವಾಗಿ ಟ್ವಿಟರ್ ಹಾಗೂ ಫೆಸ್ ಬುಕ್  ಮೂಲಕ ಅಭಿಯಾನ ನಡೆಸಿ ರಾಷ್ಟ್ರದ ಗಮನ‌ ಸೆಳೆಯುವಲ್ಲಿ  ಯಶಸ್ವಿಯಾಗಿ ತಪ್ಪಿತಸ್ಥರ ಬಂಡವಾಳ ಬಯಲು‌ ಮಾಡಿದ್ದೇವೆ. ಕೋವಿಡ್ ಆಹಾರ ಕಿಟ್ಟ್ ಹಗರಣವನ್ನು ಮಾಹಿತಿ ಹಕ್ಕಿನ ಮೂಲಕ ಬಯಲಿಗೆಳೆದು ಈ ವಂಚನೆಯ‌ ಬಗ್ಗೆ ಲೋಕಾಯುಕ್ತರಿಗೂ ದೂರು‌ನೀಡಿ ಸಮಾಜಿಕ‌ ಜಾಲತಾಣದ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ. ಕೊಟ್ಟ ಜವಾಬ್ದಾರಿಯನ್ನು  ಸಮರ್ಥವಾಗಿ ನಿಭಾಯಿಸಿದ್ದೇನೆ ಎಂಬ ಅತ್ಮ‌ತೃಪ್ತಿ ನನಗಿದೆ. ಹಾಗಾಗಿ ಹೊಸ ಜವಾಬ್ದಾರಿಯೊಂದಿಗೆ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ  ಕಾರ್ಕಳ ಬ್ಲಾಕ್ ಯುವಕಾಂಗ್ರೆಸ್ ಅದ್ಯಕ್ಷ  ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ"-ಯೋಗೀಶ್ ನಯನ್ ಇನ್ನಾ

"ದೇಶಭಕ್ತಿ, ಧರ್ಮದ ಹೆಸರಿನಲ್ಲಿ ಬಿಜೆಪಿಯು ಭ್ರಷ್ಟಾಚಾರದಲ್ಲಿ ತೊಡಗಿದೆ. ದರ್ಮದ ಹೆಸರಿನಲ್ಲಿ ಯುವಕರನ್ನು  ದಾರಿ ತಪ್ಪಿಸುತ್ತಿರುವ ಬಿಜೆಪಿಯು ಜನರ ಮನಸ್ಸುಗಳನ್ನು ಒಡೆಯುವ ಬಿಜೆಪಿಯ ಅಜೆಂಡಾ ದೇಶದದ ಜನ ಸಾಮಾನ್ಯನ ಜೀವನವನ್ನು ದುಸ್ತರಗೊಳಿಸಿದೆ. ಎಲ್ಲಾ ವರ್ಗವನ್ನೂ ಸಮಾನವಾಗಿ ಕಾಣುವ, ಹಿಂದುಳಿದ ವರ್ಗಗಳ ಯುವಕರಿಗೂ ಅಧಿಕಾರವನ್ನು ಕೊಡುವ ಏಕೈಕ ಪಕ್ಷ ಕಾಂಗ್ರೆಸ್ ಬಲಿಷ್ಟಗೊಳಿಸುವುದು ದೇಶದ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ.ಅದಕ್ಕಾಗಿ ಯುವಕರನ್ನು ಸಜ್ಜುಗೊಲಿಸುವ ಕೆಲಸವನ್ನು ಮಾಡುವೆ"-ಪ್ರದೀಪ್ ಬೇಲಾಡಿ

ಜಾಹೀರಾತು    
 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget