ಮಾಳ:ಬಂಟ್ವಾಳದ ವ್ಯಕ್ತಿಯೋರ್ವರು ಮೂಲದ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ನಗರ ಠಾಣೆಗೆ ನೂತನವಾಗಿ ಬಂದ ಎಸೈ ತೇಜಸ್ವಿ ಶೀಘ್ರವಾಗಿ ಪ್ರಕರಣ ಬೇಧಿಸಿ ಪ್ರಶಂಸೆಗೆ ಒಳಗಾಗಿದ್ದಾರೆ.
ಕಾರ್ಕಳ ತಾಲೂಕು ಮಾಳ ಗ್ರಾಮದ ಕಟ್ಟೆಬೈಲು ಎಂಬಲ್ಲಿ ಸಂತೋಷ ನಾಯಕ್ ರವರ ಮನೆ ಬಳಿಯ ಅರಣ್ಯ ಪ್ರದೇಶದಲ್ಲಿ ಸುಮಾರು 60 ವರ್ಷ ಪ್ರಾಯದ ಓರ್ವ ಗಂಡಸಿನ ಮೃತ ಶರೀರವು ಕಾಟು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕೂಡಲೇ ಅಕ್ಕಪಕ್ಕದ ಮನೆಯವರು ಸ್ಥಳೀಯರಾದ ಅಕ್ಷತ್ ಮಾಳ,ನೀಲೇಶ್ ತೆಂಡೂಲ್ಕರ್ ರವರಿಗೆ ವಿಷಯ ತಿಳಿಸಿದರು.ಬಳಿಕ ಅಕ್ಷತ್ ರವರು ಠಾಣೆಗೆ ಮಾಹಿತಿ ತಿಳಿಸಿದಾಗ ಕೂಡಲೇ ಸ್ಥಳಕ್ಕಾಗಮಿಸಿದ ಎಸೈ ತೇಜಸ್ವಿ ಹಾಗೂ ತಂಡದವರು ಶವವನ್ನು ಗುರುತಿಸಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡಲೇ ಅಕ್ಕಪಕ್ಕದ ಮನೆಯವರು ಸ್ಥಳೀಯರಾದ ಅಕ್ಷತ್ ಮಾಳ,ನೀಲೇಶ್ ತೆಂಡೂಲ್ಕರ್ ರವರಿಗೆ ವಿಷಯ ತಿಳಿಸಿದರು.ಬಳಿಕ ಅಕ್ಷತ್ ರವರು ಠಾಣೆಗೆ ಮಾಹಿತಿ ತಿಳಿಸಿದಾಗ ಕೂಡಲೇ ಸ್ಥಳಕ್ಕಾಗಮಿಸಿದ ಎಸೈ ತೇಜಸ್ವಿ ಹಾಗೂ ತಂಡದವರು ಶವವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ವ್ಯಕ್ತಿ ಧರಿಸಿದ್ದ ಬಟ್ಟೆಯಲ್ಲಿ ಬಂಟ್ವಾಳದ ಟೈಲರ್ ಅಂಗಡಿಯ ವಿಳಾಸವನ್ನು ಅಂಟಿಸಲಾಗಿತ್ತು ತಕ್ಷಣ ಬಂಟ್ವಾಳ ಠಾಣೆಗೆ ಕರೆ ಮಾಡಿ ವಿಚಾರಿಸಿದಾಗ ನಾಲ್ಕು ದಿನದ ಹಿಂದೆ ಸಿದ್ದಕಟ್ಟೆ ಮಂಚಕಲ್ಲು ನಿವಾಸಿ ಕೊರಗಪ್ಪ ಪೂಜಾರಿ ಎಂಬುವವರು ನಾಪತ್ತೆಯಾಗಿದ್ದಾರೆ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಿಳಿದುಬಂದಿದೆ.
ಕೂಡಲೇ ಪ್ರಕರಣ ದಾಖಲಿಸಿದವರ ಮನೆಯವರಿಗೆ ಕರೆಮಾಡಿ ವಿಚಾರಿಸಿದಾಗ ನಾಪತ್ತೆಯಾಗಿದ್ದ ವ್ಯಕ್ತಿ ಕೊನೆಯ ಭಾರಿ ಧರಿಸಿದ ಬಟ್ಟೆಗೂ ಶವದ ಬಳಿ ಸಿಕ್ಕ ಬಟ್ಟೆಯೂ ಹೋಲಿಕೆಯಾಗಿದೆ.
ಬಳಿಕ ಮನೆಯವರು ಸ್ಥಳಕ್ಕೆ ಆಗಮಿಸಿ ಶವವನ್ನು ಗುರುತು ಪತ್ತೆ ಮಾಡಿದ್ದಾರೆ. ಪ್ರಕರಣ ಕೆಲವೇ ಗಂಟೆಗಳಲ್ಲಿ ಅಂತ್ಯಗೊಳಿಸಿದ ಎಸೈ ತೇಜಸ್ವಿರವರ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಾಹೀರಾತು
Post a comment