ಕಾರ್ಕಳ:"ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸದಂತೆ ದಬ್ಬಾಳಿಕೆ ನಡೆಸಿದ್ದಾರೆ"-ವಿನಯ್ ಕುಮಾರ್ ಸೊರಕೆ
"ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ"-ಮಂಜುನಾಥ್ ಪೂಜಾರಿ ಹೆಬ್ರಿ
"ನಿಮ್ಮ ನಾಯಕ ಯಾರು ಎಂದು ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ"-ನಾಯಕರ ವಿರುದ್ಧವೇ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಮುಖಂಡ ಡೇನಿಯಲ್
ಅವರು ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಅಭಿನಂದನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಆಡಳಿತವು ಕೊರೊನಾ ನೆಪದಲ್ಲಿ 72 ದಿನಗಳ ಲಾಕ್ ಡೌನ್ ಹೇರಿ ಬಡವರ ಬದುಕನ್ನು ಬೀದಿಗೆ ತಂದಿದೆ . ದೇಶದ ಶೇ 80 ರಷ್ಟು ಜನ ಕೃಷಿಯನ್ನು ಅವಲಂಬಿತರಾಗಿದ್ದು ಬಿಜೆಪಿಯ ದುರಾಡಳಿತದಿಂದ ರೈತವಿರೋಧಿ ಕಾಯಿದೆ ಜಾರಿಗೆ ಬಂದು ಕಾರ್ಪೋರೆಟ್ ವಲಯ ಬಡವರ ಜಮೀನು ಕೊಳ್ಳೆಹೊಡೆಯುತ್ತಿದೆ ಇದರ ಪರಿಣಾಮವಾಗಿ ಅದಾನಿ,ಅಂಬಾನಿ ಶ್ರೀಮಂತರಾಗುತ್ತಿದ್ದಾರೆ ಎಂದು ಆರೋಪಿಸಿದರು.ಹಿಂದುತ್ವ ಬಿಜೆಪಿಯ ಆಸ್ತಿಯಲ್ಲ, ಅವರದು ಗೋಡ್ಸೆ ಹಿಂದುತ್ವ ,ಕಾಂಗ್ರೆಸ್ ನದ್ದು ಗಾಂಧೀಜಿ ಹಿಂದುತ್ವ ಎಂದು ಬಿಜೆಪಿ ಹಿಂದುತ್ವದ ವಿರುದ್ಧ ಕಿಡಿಕಾರಿದರು.
ರಾಜ್ಯದ ಜ್ವಲಂತ ಸಮಸ್ಯೆಗಳಾದ ಕಸ್ತೂರಿರಂಗನ್ ಹಾಗೂ ಮರಳಿನ ಸಮಸ್ಯೆ ಬಗೆಹರಿಸಲಾಗದ ಬಿಜೆಪಿಯವರು ಸುಳ್ಳು ಅಪಪ್ರಚಾರಗಳಿಂದ ಅಧಿಕಾರ ಹಿಡಿಯುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಘಟಿತ ಪ್ರಯತ್ನದಿಂದ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಇದೇ ವೇಳೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಬಿಜೆಪಿ ಉದ್ಯಮಿಗಳ ಅಕ್ರಮ ಹಣದ ಮೂಲಕ ಮತದಾರರಿಗೆ ಹಣ ಹಂಚಿ ಗೆಲ್ಲುತ್ತಿದೆ ಆದರೆ ಕಾಂಗ್ರೆಸ್ ಗೆ ದೇಣಿಗೆ ಕೊರತೆಯಿಂದ ಸಂಘಟನೆಗೆ ಸ್ವಲ್ಪ ಹಿನ್ನಡೆಯಾಗಿದೆ ಆದರೂ ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ , ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ ಮುಂದಿನ ಚುನಾವಣೆಗೆ ಸಜ್ಜಾಗುವ ಮೂಲಕ ಕಳೆದುಕೊಂಡ ಅಧಿಕಾರವನ್ನು ಮತ್ತೆ ಪಡೆಯಬೇಕು ಎಂದು ಕರೆ ನೀಡಿದರು
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಡೇನಿಯಲ್ "ಈ ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ನಿರ್ಲಕ್ಷ ತೋರಿದ್ದಾರೆ.ಚುನಾವಣೆಯ ಸಂಧರ್ಭದಲ್ಲಿ ಮತಕೇಳಲು ಜನರ ಬಳಿ ಹೋದಾಗ ಜನರು ನಿಮ್ಮ ನಾಯಕ ಯಾರು ಎಂದು ಪ್ರಶ್ನೆ ಮಾಡಿದ್ದು ಇರಿಸುಮುರಿಸಿನ ಪರಿಸ್ಥಿತಿ ಉಂಟಾಗಿದೆ.ಕಾರ್ಕಳದಲ್ಲಿ ಸಮರ್ಥ ನಾಯಕತ್ವ ಇಲ್ಲದೆ ಈ ಭಾರಿ ಚುನಾವಣೆಯಲ್ಲಿ ಸೋತಿದ್ದೇವೆ.ನಮ್ಮಲ್ಲಿರುವ ಭಿನ್ನಮತ ಬಟಾಬಯಲಾಗಿದೆ.ಸೂಕ್ತ ಸಮರ್ಥ ನಾಯಕತ್ವ ನಮಗೆ ಬೇಕು.ಇಲ್ಲದಿದ್ದರೆ ಮುಂದಿನ ಚುನಾವಣೆಯನ್ನು ಎದುರಿಸಲು ಖಂಡಿತ ಎದುರಿಸಲು ಸಾಧ್ಯವಿಲ್ಲ ಎಂದು ಪಕ್ಷದ ಮುಖಂಡರ ಎದುರೇ ಎಂದು ಆಕ್ರೋಶ ಹೊರ ಹಾಕಿದರು.
Post a comment