ಮಾಳ:ಅತೀ ವೇಗದಿಂದ ರಸ್ತೆ ಬದಿ ಚಲಾಯಿಸಿಕೊಂಡು ಹೋಗಿ ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಜಖಂ ಗೊಂಡ ಘಟನೆ ಮಾಳ ಚೆಕ್ ಪೋಸ್ಟ್ ಬಳಿ ನಡೆದಿದೆ.
ದಿನಾಂಕ 31/12/2020 ರಂದು ಬೆಳಗಿನ ಜಾವ 03:30 ಗಂಟೆಗೆ ಶೃಂಗೇರಿಯಿಂದ ಮಂಗಳೂರಿಗೆ ಹೋಗುತ್ತಿದ್ದ AP-05-TA-1236 ನೋಂದಣಿಯ ಲಾರಿಯು ಅದರ ಚಾಲಕ ಅತೀ ವೇಗದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಮಾಳ ಗ್ರಾಮದ ಮಾಳ ಚೆಕ್ ಪೊಸ್ಟ್ ನಿಂದ ಸುಮಾರು ಎರಡು ಕಿ.ಮೀ ಹಿಂದೆ ಮಾಳ ಘಾಟಿಯಲ್ಲಿ ರಸ್ತೆಯ ಎಡಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಲಾರಿ ಭಾಗಷ ಜಖಂ ಗೊಂಡಿದೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment