ಎನ್.ಸಿ.ಸಿ ದೇಶಪ್ರೇಮಕ್ಕೆ ಬುನಾದಿ -ಗಣೇಶ್‌ಕಾರ್ಣಿಕ್ ಜ್ಞಾನಸುಧಾ : ಎನ್.ಸಿ.ಸಿ ಸೀನಿಯರ್ ವಿಂಗ್‌ಉದ್ಘಾಟನೆ-Times of karkala

 ದೇಶ ಸೇವೆಯಲ್ಲಿಯುವಕರನ್ನುಮುನ್ನುಗ್ಗುವಂತೆಮಾಡುತ್ತಿರುವ   ಪ್ರೇರಣದಾಯಕಘಟಕ ಎನ್.ಸಿ.ಸಿ.ಆಗಿದೆ. ದೇಶಕ್ಕಾಗಿಕರ್ತವ್ಯ ನಿರ್ವಹಿಸಲು ಬಯಸುವಯುವಕರಿಗೆ ವರದಾನ ಎನ್.ಸಿ.ಸಿ ಆಗಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಗಣೇಶ್‌ಕಾರ್ಣಿಕ್ ನುಡಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನಕ್ರೀಡಾಂಗಣದಲ್ಲಿ ನಡೆದ ಎನ್.ಸಿ.ಸಿ ಸೀನಿಯರ್ ವಿಂಗ್‌ಉದ್ಘಾಟನಕಾರ್ಯಕ್ರಮದಲ್ಲಿಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮುಖ್ಯಅಭ್ಯಾಗತರಾಗಿಕರ್ನಾಟಕ-ಗೋವಾಡೈರಕ್ಟರೇಟ್ ಫಾರ್ಮರ್‌ಡಿ.ಡಿ.ಜಿ, ಬ್ರಿಗೇಡಿಯರ್‌ಡಿ.ಎಮ್ ಪೂರ್ವಿಮಠ್ ವಿ.ಎಸ್.ಎಂ ಮಾತನಾಡಿಜಗತ್ತಿನಲ್ಲಿಯೇಅತೀ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರಿರುವಅತ್ಯಂತ ಶಿಸ್ತು ಬದ್ದ ದಳವಿದ್ದರೆ ಅದು ಎನ್.ಸಿ.ಸಿ.ಭಾರತದ ೫೪೩ ಜಿಲ್ಲೆಗಳಲ್ಲಿ ಇಂದು ಎನ್.ಸಿ.ಸಿ ಬಹುದಕ್ಷವಾಗಿಕಾರ್ಯನಿರ್ವಹಿಸುತ್ತಾ ಬರುತ್ತಿದೆ. 


ಯಾವುದೇ ರೀತಿಯಅನಾಹುತ, ಆಕಸ್ಮಿಕ ಘಟನೆಗಳು ನಡೆದಾಗದೇಶ ಸೇವೆಯಲ್ಲಿತನ್ನನ್ನುತಾನು ತೊಡಗಿಸಿ ಕೊಂಡಿದೆ. ಎನ್.ಸಿ.ಸಿ ಅತ್ಯಂತ ದಕ್ಷತೆಯಿ೦ದ ಕಾರ್ಯನಿರ್ವಹಿಸುತ್ತಿರುವುದರ ಕುರಿತ0ತೆ ಹೆಗ್ಗಳಿಕೆ ಇದೆ. 

ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಎನ್.ಸಿ.ಸಿ ಘಟಕವು ಪ್ರಾರಂಭಗೊ0ಡಿರುವುದು ಬಹು ಶ್ಲಾಘನೀಯ ಸಂಗತಿ. ಎಲ್ಲಾ ಕೆಡೆಟ್‌ಗಳು ಮುಂದಿನ ದಿನಗಳಲ್ಲಿ ಭಾರತದ ಸೇನೆಯಲ್ಲಿ ಮಿಂಚುವoತಾಗಲಿ ಎಂದರು. 

ವೇದಿಕೆಯಲ್ಲಿಉಡುಪಿ ಎನ್.ಸಿ.ಸಿ ಬೆಟಾಲಿಯನ್‌ನ ಸುಬೇದರ್ ನರೇಶ್‌ಸಿಂಗ್ ಉಪಸ್ಥಿತರಿದ್ದರು.ಇದೇ ಸಂದರ್ಭ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ  ಕಾರ್ಕಳ ತಾಲೂಕಿನ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಅಜೆಕಾರುಪದ್ಮಗೋಪಾಲ್‌ಎಜ್ಯುಕೇಶನ್‌ಟ್ರಸ್ಟ್ನಟ್ರಸ್ಟಿಗಳಾದಕರುಣಾಕರ ಶೆಟ್ಟಿ, ಶ್ರೀಮತಿ ವಿದ್ಯಾವತಿಎಸ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಶಾಂತಿರಾಜ್‌ಜೈನ್, ಶ್ರೀ ಅನಿಲ್ ಕುಮಾರ್‌ಜೈನ್, ಜ್ಞಾನಸುಧಾಉಭಯ ಸಂಸ್ಥೆಗಳ ಪ್ರಾಂಶುಪಾಲರುಗಳಾದ ದಿನೇಶ್.ಎಂ.ಕೊಡವೂರ್, ಶ್ರೀಮತಿ ಉಷಾ ರಾವ್.ಯು, ಉಪಪ್ರಾಂಶುಪಾಲರುಗಳಾದ ಶ್ರೀಸಾಹಿತ್ಯ, ಶ್ರೀಮತಿ ವಾಣಿಜಯಶೀಲ್, ಪಿ.ಆರ್.ಓ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿಉಪಸ್ಥಿತರಿದ್ದರು. 

ಎ.ಪಿ.ಜಿ.ಇ.ಟಿಅಧ್ಯಕ್ಷಡಾ.ಸುಧಾಕರ್ ಶೆಟ್ಟಿಯವರುಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್.ಸಿ.ಸಿ. ಅಧಿಕಾರಿ ಶ್ರೀ ಸುಮಿತ್ ಇ ವಂದಿಸಿ, ಉಪನ್ಯಾಸಕ ಪ್ರಜ್ವಲ್‌ಕುಲಾಲ್‌ಕಾರ್ಯಕ್ರಮ ನಿರೂಪಿಸಿದರು. 


ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget