ಹೆಬ್ರಿ:ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪಿದ ಘಟನೆ ಹೆಬ್ರಿ ಕುಚ್ಚೂರು ಗ್ರಾಮದ ಕಾನ್ಬೇಟ್ಟುವಿನ ಗಾರ್ಡ್ ಬೆಟ್ಟು ಬಳಿ ದಿನಾಂಕ 21/12/2020 ರಂದು ನಡೆದಿದೆ.
ಹೆಬ್ರಿಯ ಚೈತ್ರ(31) ಎಂಬುವವರಿಗೆ ಬಳ್ಳಾರಿಯ ಕಂಪ್ಲಿ ಎಂಬಲ್ಲಿನ ನಿವಾಸಿ ಸಂತೋಷ್ ನೊಂದಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು.ಆದರೆ ಅವರ ಸಂಸಾರದಲ್ಲಿ ವೈಮನಸ್ಸು ಉಂಟಾದ ಕಾರಣ ಅವರ ಗಂಡ ವಿವಾಹ ವಿಚ್ಪೇದನಕ್ಕೆ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.
ಚೈತ್ರಾ ಸುಮಾರು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದುಅವರಿಗೆ ಉಡುಪಿ ಬಾಳಿಗಾ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿದರೂ ಗುಣಮುಖವಾಗಿರಲಿಲ್ಲ.ಇದರಿಂದಾಗಿ ಮಾನಸಿಕ ಖಿನ್ಯತೆಗೆ ಒಳಗಾಗಿ ಇದೇ ವಿಚಾರದಲ್ಲಿ ದಿನಾಂಕ 21/12/2020 ರಂದು ಮದ್ಯಾಹ್ನ 2:00 ಗಂಟೆಯಿಂದ ಸಂಜೆ 4:00 ಗಂಟೆಯ ಮದ್ಯಾವಧಿಯಲ್ಲಿ ಕುಚ್ಚೂರು ಗ್ರಾಮದ ಕಾನ್ಬೇಟ್ಟುವಿನ ಗಾರ್ಡ್ ಬೆಟ್ಟು ಎಂಬಲ್ಲಿ ತನ್ನ ಮನೆಯ ಬಳಿ ಇರುವ ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment