ಕಾರ್ಕಳ:ದಂಪತಿ ಗಳಾದ ವೆಂಕಟರಮಣ ಶರ್ಮ ಮತ್ತು ಪದ್ಮಶ್ರೀ ಅವರು ತಮ್ಮ ವೈವಾಹಿಕ ವಾರ್ಷಿಕೋತ್ಸವ ಕರುಣಾಳು ಬಾ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಒಂದು ಮನೆಯ ಮೂರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸೋಲಾರ್ ಲೈಟ್ ಘಟಕವನ್ನು ನೀಡುವುದರ ಮೂಲಕ ವಿಶೇಷವಾಗಿ ಆಚರಿಸಿಕೊಂಡರು .
ಈ ಕಾರ್ಯಕ್ರಮದ ಸ್ಥಾಪಕ ರಾಗಿರುವ ರೋಟರಿ ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ರೋ.ರಮಿತಾ ಶೈಲೇಂದ್ರ ರಾವ್ ಅವರು ಹಾಗೂ ಯುವವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಅವರು ಅಶೋಕ್ ಸುವರ್ಣ ಮತ್ತು ಯುವವಾಹಿನಿ ಸದಸ್ಯರು, ವಾರ್ಡ್ ಕೌನ್ಸಿಲರ್ ಆಗಿರುವ ರೆಹಮತ್ ಮತ್ತು ಪ್ರವೀಣ್ ಶೆಟ್ಟಿಯವರು ಉಪಸ್ಥಿತರಿದ್ದರು.
Post a comment