ಕಾರ್ಕಳ:ಉಚಿತ ವೈದ್ಯಕೀಯ ತಪಾಸಣಾ ಶಿಬಿರ-Times of karkala

ಕಾರ್ಕಳ:ಉಚಿತ ವೈದ್ಯಕೀಯ ತಪಾಸಣಾ ಶಿಬಿರ 


ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಡಾಕ್ಟರ್ ಟಿ.ಎಂ.ಎ ಪೈ  ರೋಟರಿ ಹಾಸ್ಪಿಟಲ್ ಕಾರ್ಕಳ, ಗ್ರಾಮ ಪಂಚಾಯತ್  ಕಡ್ತಲ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು ಕಡ್ತಲ, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂದೆರಂಗಡಿ ಹಾಗೂ ವಿಶ್ವಕರ್ಮ ಮಹಿಳಾ ಮಂಡಳಿ ನೆಕ್ರಾಜೆ ಕಾರ್ಕಳ ಇವರ ಸಹಯೋಗದೊಂದಿಗೆ ಸಮಾಜ ಮಂದಿರ, ಕಡ್ತಲ ಇಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. 



ಈ ಶಿಬಿರದಲ್ಲಿ  ಹೃದಯರೋಗ, ಕಿವಿ-ಮೂಗು-ಗಂಟಲು ಹಾಗೂ ಕಣ್ಣಿನ ತಪಾಸಣೆ ನಡೆಯಿತು. ರೋಟರಿ ಜಿಲ್ಲಾ ಗವರ್ನರ್ ರೊ. ಎಂ ಪಿ ಹೆಚ್ ಎಫ್ ರಾಜಾರಾಮ್ ಭಟ್ ಶಿಬಿರವನ್ನು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ರೊ ಪ್ರಶಾಂತ್ ಬೆಳಿರಾಯ ವಹಿಸಿದ್ದು,  ರೊ.ವರದಾಂಬಾ ರಾಜಾರಾಮ್ ಭಟ್ ,ಸಹಾಯಕ ಗವರ್ನರ್ ರೊ.ನವೀನ್ ಅಮೀನ್,ಕಡ್ತಲ ಗ್ರಾಮ ಪಂಚಾಯತ್ ಅಧಿಕಾರಿಗಳಾದ ಶ್ರೀಮತಿ ಫರ್ಝಾನಾ, ಪ್ರಾಥಮಿಕ ಆರೋಗ್ಯ ಕೇಂದ್ರದ   ಶ್ರೀ ಮತಿ  ಚಂದ್ರಿಕಾ ಕಿಣಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಡಾಕ್ಟರ್ ಟಿಎಂಎ ಪೈ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ರೊ. ನಟೇಶ್ ಕುಮಾರ್, ರೊ.ಗಣೇಶ್ ಬರ್ಲಾಯ ಉಪಸ್ಥಿತರಿದ್ದರು.

ಸುಮಾರು ಇನ್ನೂರಕ್ಕೂ ಹೆಚ್ಚು ಫಲಾನುಭವಿಗಳು ಈ ಶಿಬಿರದ ಉಪಯೋಗವನ್ನು ಪಡೆದರು. ಶ್ರೀ ಶೇಖರ್ ಕಡ್ತಲ ಈ ಉದ್ಘಾಟನಾ  ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀ ರಾಘವೇಂದ್ರ ಮಠದ ಬೆಟ್ಟು ಧನ್ಯವಾದ ಗೈದರು.


ಜಾಹೀರಾತು 









Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget