ರಾಮ ಮಂದಿರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಅವಕಾಶ ಪೂರ್ವ ಜನ್ಮದ ಪುಣ್ಯದ ಫಲ : ಶ್ಯಾಮಲಾ ಕುಂದರ್
ನಿಟ್ಟೆ :ಶ್ರೀ ಕೇಶವ ಭಜನಾ ಮಂಡಳಿಯ 22 ನೇ ವರ್ಷದ ಭಜನಾ ಮಂಗಲೋತ್ಸವ ಹಾಗು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಪರಪ್ಪಾಡಿ ಯ ಕೇಶವ ನಗರ ಬಳಿ ನಡೆಯಿತು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಮಾತನಾಡಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ನಮಗೆಲ್ಲ ಲಭಿಸಿರುವುದು ಪೂರ್ವ ಜನ್ಮ ದ ಫಲ ಪ್ರತಿಯೊಬ್ಬ ಹಿಂದೂ ಭಾಂದವರು ಈ ಕಾರ್ಯದಲ್ಲಿ ಕೈಜೋಡಿಸಿ ಎಂದರು.
ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಶ್ರೀಕಾಂತ್ ಪ್ರಭು ಮಾತನಾಡಿ ಧರ್ಮ ರಕ್ಷಣೆಯಲ್ಲಿ ಭಜನೆಯ ಪಾತ್ರ ಅಮೂಲ್ಯ. ಮುಂದಿನ ಪೀಳಿಗೆಗಳಲ್ಲಿ ಧರ್ಮದ ಅರಿವು ಮೂಡಿಸುವ ಕಾರ್ಯವನ್ನು ಪೋಷಕರು ಕೈಗೊಳಬೇಕು ಆಗ ಮಾತ್ರ ಧರ್ಮ ರಕ್ಷಣೆ ಸಾಧ್ಯ. ಮದರಂಗಿ ಕಾರ್ಯಕ್ರಮದಲ್ಲಿ ಭಜನೆ ಮಾಡುವ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವನಂತೆ ಆಗಬೇಕು ಎಂದರು.
ಈ ಸಂದರ್ಭ ನಿಟ್ಟೆ ಆಶಾ ಕಾರ್ಯಕರ್ತೆ ಶಕುಂತಲಾ s. ಶೆಟ್ಟಿ ಯವರನ್ನು ಕೊರೊನಾ ವಾರಿಯರ್ ಪರವಾಗಿ ಸನ್ಮಾನಿಸಲಾಯಿತು .
ಸಭಾ ಕಾರ್ಯಕ್ರಮದ ಅಧ್ಯಕ್ಷತೇ ಯನ್ನು ಬಿ. ಕೆ ನಾಯ್ಕ್ ನಡಿಮನೆ ವಹಿಸಿದ್ದರು.
ವೇದಿಕೆಯಲ್ಲಿ ಕೇಶವ ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ರಾಜೇಶ್ ಕುಲಾಲ್, ಸಂಚಾಲಕರಾದ ಸುರೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಕುಲಾಲ್ ಸ್ವಾಗತಿಸಿದರು. ಸುರೇಶ್ ಭಟ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಪೂಜಾರಿ ವಂದಿಸಿದರು.
ಜಾಹೀರಾತು
Post a comment