ಇಂದಿನಿಂದ ಅತ್ತೂರು ಬಸಲಿಕಾ ಸಾಂತ್ ಮಾರಿ ಜಾತ್ರೆ,ಶಾಸಕ ಸುನೀಲ್ ಕುಮಾರ್ ಉದ್ಘಾಟನೆ-Times of karkala

ಅತ್ತೂರು ಸಂತ ಲಾರೆನ್ಸ್ ಬಸಲಿಕಾದ ವಾರ್ಷಿಕ ಜಾತ್ರೆಯು ಜನವರಿ 18  ರಿಂದ 28  ರ ವರೆಗೆ ಸರಕಾರದ ಕೋವಿಡ್ ನಿಯಮದಡಿ ಸರಳವಾಗಿ ನಡೆಯಲಿದೆ.ಜ. 18ರಿಂದ 24ರ ವರೆಗೆ ಕೊಂಕಣಿಯಲ್ಲಿ ಬಲಿಪೂಜೆ ನಡೆಯಲಿದೆ. ಜ. 25ರಿಂದ 28ರ ವರೆಗೆ ಕೊಂಕಣಿ ಮತ್ತು ಕನ್ನಡ ಭಾಷೆಗಳಲ್ಲಿ ಬಲಿಪೂಜೆ ನಡೆಯಲಿದೆ.

ಪ್ರತೀ ವರ್ಷ 5  ದಿನಗಳಲ್ಲಿ 50  ಬಲಿ ಪೂಜೆಗಳು ನಡೆಯುತ್ತಿದ್ದವು.ಲಕ್ಷಾಂತರ ಮಂದಿ ಸೇರುತ್ತಿದ್ದರು.ಆದರೆ ಈ ಬಾರಿ ಜನಸಂದಣಿ ತಪ್ಪಿಸುವ ಸಲುವಾಗಿ 11 ದಿನ 55 ಬಲಿ ಪೂಜೆಗಳು ನಡೆಯಲಿದೆ.

ಭಾನುವಾರ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ನಡೆಯಿತು. ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಧರ್ಮಗುರು ಜಾಜ್ ಡಿಸೋಜಾ ಪ್ರಾರ್ಥನೆ ನೆರವೇರಿಸಿದರು. ಜಿಪಂ ಸದಸ್ಯೆ ರೇಷ್ಮಾ ಶೆಟ್ಟಿ, ತಾಪಂ ಸದಸ್ಯ ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಸ್ವಾಗತಿಸಿದರು. ಕಾರ್ಯದರ್ಶಿ ಬೆನೆಡಿಕ್ಟಾ ನೊರೊನ್ಹಾ ವಂದಿಸಿದರು.


ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget