ಮುಂಡ್ಲಿ:ಸ್ವರ್ಣಾ ನದಿ ತೀರದಲ್ಲಿ ಸ್ವರ್ಣಾರತಿ ಕಾರ್ಯಕ್ರಮ-Times of karkala

 ಮುಂಡ್ಲಿಯ ಸೇತುವೆಯ ಬಳಿ ದೇವಿ ಸ್ವರ್ಣ ಮಾತೆಯ ಸ್ವರ್ಣ ಆರತಿ ಕಾರ್ಯಕ್ರಮ ಇಂದು ಸೂರ್ಯೋದಕ್ಕಿಂತಲೂ ಮೊದಲು ನಡೆಯಿತು.

ಜಯಪ್ರಕಾಶ ಪೆರುವಾಜೆ ಇವರು ಸ್ವಾಗತಿಸಿ  ಭಾರತಾಂಬೆಗೆ ದೀಪಬೆಳಗಿಸಿ  ಪೂಜೆಯನ್ನು  ನಿಟ್ಟೆಯ ಪ್ರೊಫೆಸರ್ ವೆಂಕಟರಮಣ ಪ್ರಸಾದ್ ನಡೆಸಿ ಕೊಟ್ಟರು.ಮಾನ್ಯ ಶಾಸಕರಾದ ಸುನೀಲ್ ಕುಮಾರ್  ಇವರರು ಸ್ವರ್ಣೆಗೆ ಆರತಿಯನ್ನು ಮಾಡಿ ಹಣತೆಗಳನ್ನು ನದಿಗಳಲ್ಲಿ ಬಿಡಲಾಯಿತು. ಈಗಿನ ಯುವ ಪೀಳಿಗೆ ಇಂತಹ ಪರಿಸರ ಪ್ರೇಮಿ ಕಾರ್ಯಕ್ರಮಗಳನ್ನು ಮಾಡುವುದು ಪ್ರಶಂಸನೀಯ ಎಲ್ಲಾ ಯುವಜನತೆ ತಮ್ಮನ್ನು ತಾವು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸುವುದರಿಂದ ವಾರದ 1ದಿನ ವನ್ನು ಪರಿಸರ ಗೋಸ್ಕರ ಇಡುವುದರಿಂದ ಮುಂದೊಂದು ದಿನ ಸ್ವರ್ಣ ಕಾರ್ಕಳ ಮಾಡಲು ಯುವಜನತೆ ಸಾಕ್ಷಿಯಾಗುತ್ತದೆ, ಕಾರ್ಕಳದ ಸ್ವಚ್ಚತೆಗೆ ಹಲವಾರು ತಂಡಗಳು ಕೆಲಸ ಮಾಡಿಕೊಂಡಿದ್ದು, ಇಂದು ಸ್ವಚ್ಛ ಬ್ರಿಗ್ರೇಡ್ ಕಾರ್ಕಳ, ಹಸಿರೇ ಉಸಿರು ತೆಳ್ಳಾರು ಹಾಗೂ  ಯುವಸ್ಪಂದನ ಮುಂಡ್ಲಿ ಇವರ ನೇತ್ರತ್ವದಲ್ಲಿ ಪ್ರಾರಂಭಗೊಂಡ ಈ ಕಾರ್ಯಕ್ರಮವು ಅಮೋಘವಾಗಿ ಮೂಡಿ ಬರಲಿ ಎಂದು ಅಭಿನಂದಿಸಿದರು. 


ರೋಟರಿ ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರಮಿತಾ ಶೈಲೇಂದ್ರ ಹಾಗೂ ಇತರ ಮುತ್ತೈದೆಯರಿಂದ ಸ್ವರ್ಣೆಗೆ ಬಾಗಿನವನ್ನು ಅರ್ಪಿಸಲಾಯಿತು. ನದಿಯ ಮಹತ್ವದ ಬಗ್ಗೆ ವೆಂಕಟ್ ರಾಜ್ ಭಟ್  ಪೆರ್ವಾಜೆ ಯವರು ನೆರೆದಿರುವ ಎಲ್ಲಾ ಸದಸ್ಯರಿಗೆ ಸಂಪ್ರದಾಯದಲ್ಲಿ ನದಿಯನ್ನು ಯಾಕೆ ಪೂಜಿಸುತ್ತಿದ್ದರು ಎಂಬ ಮಾಹಿತಿಯನ್ನು ನೀಡಿದರು.  


ಕಾರ್ಯಕ್ರಮದಲ್ಲಿ ಸ್ವರ್ಣರಾಧನಾ ಕಾರ್ಕಳ ತಂಡವು ಹಲವು ಪರಿಸರ ಸ್ಪರ್ಧೆಗಳನ್ನು ಇಟ್ಟಿದ್ದು ಈ ಬಹುಮಾನವನ್ನು ಯುವವಾಹಿನಿ ಅಧ್ಯಕ್ಷ ಗಣೇಶ್ ಸಾಲ್ಯಾನ್ ಅವರು ವಿತರಿಸಿದರು.  ಗ್ರಾಮದ ಹಿರಿಯರಾದ ವೀರಸೇನ ಇಂದ್ರ ಹಾಗೂ ಸಂಪತ್ ಕುಮಾರ್ ಉಪಸ್ಥಿತರಿದ್ದರು.ಯುವಸ್ಪಂದನ ಸದಸ್ಯ ಅಭಿನಂದನ್ ಜೈನ್ ಅವರು ವಂದಿಸಿದರು.  ಕಾರ್ಯಕ್ರಮದ ನಿರೂಪಣೆಯನ್ನು ಸುಬ್ರಹ್ಮಣ್ಯ ದೇವಾಡಿಗ ಮಾಡಿದರು.ಸ್ವಚ್ಛ ಬ್ರಿಗ್ರೇಡ್ ಕಾರ್ಕಳ, ಹಸಿರು ಉಸಿರು ಸದಸ್ಯರು, ಯುವ ಸ್ಪಂದನ ಸದಸ್ಯರು ಸೇರಿ ಮುಂಡ್ಲಿಯ ಹತ್ತಿರ ಸ್ವಚ್ಛತೆ ಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಸಫಲ ಗೊಳಿಸಿದರು.


ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget