ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ.-Times of karkala

 


ಉಡುಪಿ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಯವರ ಕಛೇರಿಯಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಶಿಲ್ಪಾಚಾರ್ಯ   ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ ಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅಮರ ಶಿಲ್ಪಿ ಜಕಣಾಚಾರ್ಯ ಭಾವಚಿತ್ರ ಕ್ಕೆ ದೀಪ ಬೆಳಗಿ‌ ದೀಪ ನಮನ ಸಲ್ಲಿಸಿದರು.

ಉಡುಪಿ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶುಕ್ರವಾರ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ ನಡೆಯಿತು.


ಬಿಳಿಯಾರು ಗಣಪತಿ ಆಚಾರ್ಯ ವಿಶೇಷ ಉಪನ್ಯಾಸ ನೀಡಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯ ಕೇವಲ ವಿಶ್ವಕರ್ಮ ಸಮುದಾಯಕ್ಕೆ ಸೀಮಿತವಾದ ಶಿಲ್ಪಿ ಅಲ್ಲ. ವಿಶ್ವಮಾನ್ಯ ಶಿಲ್ಪಿ.  ಇಂದು ಭಾರತದ ಶಿಲ್ಪಕಲೆ, ಸಂಸ್ಕೃತಿಯು ಉತ್ತುಂಗ ಏರಲು ಅಮರಶಿಲ್ಪಿ ಜಕಣಾಚಾರ್ಯ ಅವರ ಕೊಡುಗೆ ಅಗ್ರಮಾನ್ಯ ಮತ್ತು ಶಾಶ್ವತ, ಹೀಗಾಗಿ ವಿಶ್ವದ ಎಲ್ಲರೂ ಭಾರತದ ಶಿಲ್ಪಕಲೆ ಕಂಡು  ಆಕರ್ಷಿತರಾಗುತ್ತಾರೆ ಎಂದು ಅಮರಶಿಲ್ಪಿ ಜಕಣಾಚಾರ್ಯ ಅವರನ್ನು ಸ್ಮರಿಸಿದರು. 


ವಿಧಾನ ಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ನೇತ್ರತ್ವದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ   ರಮೇಶ್ ಆಚಾರ್ಯ ಮಾತನಾಡಿ ವಿಶ್ವಕರ್ಮರ ಜನನಾಯಕ ಕೆ.ಪಿ.ನಂಜುಂಡಿ ಅವರ ವಿಶೇಷವಾದ ಹೋರಾಟ ಮತ್ತು ಶ್ರಮದ ಫಲವಾಗಿ ಜನವರಿ ಒಂದರಂದು ರಾಜ್ಯದಾದ್ಯಂತ ವಿಶ್ವಕರ್ಮ ಶಿಲ್ಪಾಚಾರ್ಯ ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ ಈ ವರ್ಷದಿಂದ ಕರ್ನಾಟಕ ರಾಜ್ಯ ಸರ್ಕಾರ ಆಚರಿಸುತ್ತಿದೆ.    ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆಯನ್ನು ನಡೆಸಲು ಅಧೀಕೃತ ಘೋಷಣೆ ಮಾಡಿದ  ಸರ್ಕಾರ, ಮುಖ್ಯಮಂತ್ರಿಯವರಿಗೆ ಸರ್ಕಾರ ಘೋಷಿಸಲು ಹೋರಾಟ ಮಾಡಿದ  ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರಿಗೆ ನೇರಂಬಳ್ಳಿ ರಮೇಶ್ ಆಚಾರ್ಯ ಕೃತಜ್ಞತೆ ಸಲ್ಲಿಸಿದರು.

ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ವಿಶ್ವಕರ್ಮ ಮುಖಂಡರಾದ ಅಲೆವೂರು ಯೋಗೀಶ್ ಆಚಾರ್ಯ, ಬಿ.ಎ.ಆಚಾರ್ಯ ಮಣಿಪಾಲ, ಕೆ.ಮುರಳೀಧರ್ ಉಡುಪಿ, ವಿವಿಧ ಮುಖಂಡರು,  ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಗಂಗಾಧರ್ ಆಚಾರ್ಯ ಬಾರ್ಕೂರು, ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಚ್. ರಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಪತ್ರಕರ್ತ ಸುಕುಮಾರ್ ಮುನಿಯಾಲ್, ಯುವ ಘಟಕದ ಜಿಲ್ಲಾದ್ಯಕ್ಷ ಕೋಟ ರಾಮಕೃಷ್ಣ ಆಚಾರ್ಯ, ಮಲ್ಪೆ ಕುಮಾರ್ ಆಚಾರ್ಯ, ಕಾರ್ತಿಕ್ ಆಚಾರ್ಯ ಕುಂದಾಪುರ, ಪ್ರಮೋದ್ ಆಚಾರ್ಯ, ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,ವಿವಿಧ ಅಧಿಕಾರಿಗಳು, ವಿಶ್ವಕರ್ಮ ಸಮುದಾಯದ ಪ್ರಮುಖರು ಭಾಗವಹಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಕುಮಾರ್ ಬಿಕ್ಕೇರಿ ನಿರೂಪಿಸಿ ಸ್ವಾಗತಿಸಿದರು.


ಜಾಹೀರಾತು 

   
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget