ಉಡುಪಿ:ಒಣ ಮೀನು ಕಳ್ಳತನ ಮಾಡುತ್ತಿದ್ದವನೊಬ್ಬ ಅಜ್ಜಿಯರ ಕೈಗೆ ಸಿಕ್ಕಿಹಾಕಿಕೊಂಡ ಕುತೂಹಲಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ.
ಇತ್ತೀಚಿನ ಕೆಲ ತಿಂಗಳಿನಿ೦ದ ಚೀಲಗಳಲ್ಲಿ ಕಟ್ಟಿ ಗೂಡುಗಳಲ್ಲಿ ಇಟ್ಟಿದ್ದ ಒಣಗಿಸಿದ ಮೀನುಗಳು ಕಾಣಿಯಾಗುತ್ತಿತ್ತು. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರು.ತಮಿಳುನಾಡು ಮೂಲದ ರಮನಾಥ ಮೀನು ಕದ್ದವನು ಎಂದು ತಿಳಿದು ಬಂದಿದೆ.
ಮೀನು ಒಣಗಿಸುವ ಸ್ಥಳಕ್ಕೆ ಒಬ್ಬ ಯುವಕ ರಿಕ್ಷಾದಲ್ಲಿ ಬಂದು ಈ ಮಹಿಳೆಯರ ಬಳಿ ನನ್ನಲ್ಲಿ ಒಣ ಮೀನು ಇದೆ. ನನಗೆ ಹಣ ನೀಡಿ, ನೀವು ಮಾರಾಟ ಮಾಡುವಾಗ ಇದನ್ನು ಮಾರಾಟ ಮಾಡಿ ಎಂದು ಹೇಳಿದ್ದ ಎನ್ನಲಾಗಿದೆ.
ಆಟೋದಲ್ಲಿ ಇದ್ದ ಮೀನಿನ ಗೋಣಿ ನೋಡುವಾಗಲೇ ಮಹಿಳೆಯರಿಗೆ ಇದು ನಮ್ಮದೇ ಗೋಣಿ ಚೀಲ ಎಂದು ಸಂಶಯ ಬಂದಿತ್ತು.ಗೋಣಿ ಚೀಲ ಕೆಳಗೆ ಇರಿಸಿ ಕಟ್ಟಿದ ಹಗ್ಗ ಬಿಚ್ಚಿಸಿ ನೋಡಿದಾಗ ಅದರಲ್ಲಿ ಬರೆದು ಹಾಕಿದ ಕಾಗದ ಕಳ್ಳನನ್ನು ಹಿಡಿಯಲು ಸಾಕ್ಷಿ ಆಯಿತು.ಈ ಮಹಿಳೆಯರು, ಯಾರಿಗೆ ಮಾರಾಟ ಮಾಡಬೇಕು ಎಂಬ ಅವರ ಹೆಸರು ಬರೆದು ಗೋಣಿ ಚೀಲದ ಒಳಗೆ ಇಟ್ಟಿದ್ದಾರೆಯೋ ಅದೇ ಕಾಗದ ಅದರಲ್ಲಿ ಸಿಕ್ಕಿದೆ. ರಿಕ್ಷಾ ಚಾಲಕನಿಗೆ ಎರಡೇಟು ಬಿಗಿದಾಗ ಆತ ಈ ಕಳ್ಳತನ ವಿಚಾರ ಬಾಯ್ಬಿಟ್ಟಿದ್ದಾನೆ.
ಕದ್ದದ್ದು ನಾನಲ್ಲ, ನನಗೆ ತಮಿಳುನಾಡು ಮೂಲದ ರಮಾನಾಥ ಎಂಬುವನು ಕೊಟ್ಟದ್ದು ಎಂದು ಆಟೋ ಚಾಲಕ ಹೇಳಿದ್ದ. ಬಳಿಕ, ರಾಮನಾಥನನ್ನು ರಿಕ್ಷಾ ಚಾಲಕ ನಿಂದಲೇ ಉಪಾಯದಿಂದ ಕರೆಸಿ ಹಿಡಿದು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
Post a comment