ಕೆರ್ವಾಶೆ:ಮನೆಯ ಎದುರು ಕಟ್ಟಿಹಾಕಿದ್ದ ದನವನ್ನು ಕದ್ದ ದುರುಳರು!-Times of karkala

ಮನೆಯ ಎದುರು ಕಟ್ಟಿಹಾಕಿದ್ದ ಎರಡು ದನವನ್ನು ಕದ್ದೊಯ್ದ ಘಟನೆ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಒಂಟೆಜಾರು ಬಾಪ್ರಬೈಲು ಎಂಬಲ್ಲಿ ನಡೆದಿದೆ.


ಸಾಂದರ್ಭಿಕ ಚಿತ್ರ 

ಘಟನೆಯ ವಿವರ;ಕೆರ್ವಾಶೆ ಗ್ರಾಮದ ಒಂಟೆಜಾರು ಬಾಪ್ರಬೈಲು ನಿವಾಸಿ  ಲಿಜೋ ಮೋನ್ ಜಾರ್ಜ್ ಎಂಬುವವರು ದಿನಾಂಕ: 19/01/2021 ರಂದು  ಸಂಜೆವೇಳೆ ತಮ್ಮ ಮನೆಯಮುಂದೆ ಎರಡು ದನಗಳನ್ನು ಕಟ್ಟಿ ಹಾಕಿದ್ದು  ಮರುದಿನ ಬೆಳಿಗ್ಗೆ ಎರಡೂ ದನಗಳು ನಾಪತ್ತೆಯಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ:ಫಿರ್ಯಾದಿ ಲಿಜೋ ಮೋನ್ ಜಾರ್ಜ್‌ ಇವರು ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಒಂಟೆಜಾರು ಬಾಪ್ರಬೈಲು ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಅವರು ಸುಮಾರು 3 ವರ್ಷ ಪ್ರಾಯದ ಕಪ್ಪು ಬಣ್ಣದ ಹೆಣ್ಣು ದನ-1 ಹಾಗೂ ಸುಮಾರು 3 ವರ್ಷ ಪ್ರಾಯದ ನಸುಕಂದು ಬಣ್ಣದ ಹೆಚ್.ಎಫ್ ತಳಿಯ ಹೆಣ್ಣು ದನ-1 ಸಾಕಿಕೊಂಡಿರುತ್ತಾರೆ. ಅವುಗಳನ್ನು ನಿನ್ನೆ ದಿನಾಂಕ: 19/01/2021 ರಂದು ಸಂಜೆ ವೇಳೆಗೆ ಮನೆಯ ಎದುರಿನಲ್ಲಿ ಕಟ್ಟಿ ಹಾಕಿದ್ದು, ಫಿರ್ಯಾದಿದಾರರು ರಾತ್ರಿ 10:30 ಗಂಟೆಗೆ ಮಲಗಿರುತ್ತಾರೆ, ಬೆಳಿಗ್ಗೆ 6:00 ಗಂಟೆಗೆ ಎದ್ದು ನೋಡುವಾಗ ಸದ್ರಿ ಕಟ್ಟಿ ಹಾಕಿದ ಎರಡು ದನಗಳು ಕಾಣಿಸಿರುವುದಿಲ್ಲ, ಈ ಬಗ್ಗೆ ಮನೆಯ ಹತ್ತಿರದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡಲು ಬಂದಿದ್ದ ವಿಬಿನ್ ಮ್ಯಾಥ್ಯೂ ರವರಲ್ಲಿ ವಿಚಾರಿಸಿದಾಗ ತಾನು ರಾತ್ರಿ 2:00 ಗಂಟೆ ಸುಮಾರಿಗೆ ಟ್ಯಾಪಿಂಗ್ ಕೆಲಸ ಮುಗಿಸಿ ಮನೆಗೆ ಹೋಗುವಾಗ ಫಿರ್ಯಾದಿದಾರರ ಮನೆಯ ಎದುರಿನಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ನೋಡಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ದನಗಳನ್ನು ದಿನಾಂಕ: 20/01/2021 ರಂದು ರಾತ್ರಿ 2:00 ಗಂಟೆಯಿಂದ ಬೆಳಿಗ್ಗೆ 6:00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಪ್ಪು ಬಣ್ಣದ ಹೆಣ್ಣು ದನದ ಅಂದಾಜು ಮೌಲ್ಯ ರೂ. 5,000/-, ನಸುಕಂದು ಬಣ್ಣದ ಹೆಚ್.ಎಫ್ ತಳಿಯ ಹೆಣ್ಣು ದನದ ಅಂದಾಜು ಮೌಲ್ಯ ರೂ. 25,000/- ಆಗಿದ್ದು, ಕಳವಾದ ಎರಡು ದನಗಳ ಒಟ್ಟು ಅಂದಾಜು ಮೌಲ್ಯ ರೂ. 30,000/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2021  ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget