ಕಾರ್ಕಳ:ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ:ಎಂಪಿಎಮ್ ಕಾಲೇಜಿನಿಂದ ಕಾರ್ಕಳ ತಾಲೂಕು ಕಚೇರಿಗೆ ಬೃಹತ್ ಜಾಥಾ-Times of karkala

 

ಸರಕಾರವು ಕಾಲೇಜುಗಳನ್ನು ತೆರೆದು ಉಪನ್ಯಾಸ ಆರಂಭಿಸಿದೆ ಆದರೆ ಮುಖ್ಯವಾಗಿ  ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನಿಯುಕ್ತಿ ಮಾಡದೆ ಇರುವುದರಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತೀವ್ರವಾಗಿ ಶಿಕ್ಷಣದಲ್ಲಿ ತೊಡಕಾಗಿರುವ ಕಾರಣ  ಎಂ ಪಿ ಎಂ ಸರಕಾರಿ ಪ್ರಥಮದರ್ಜೆ ಕಾಲೇಜು ಕಾಬೆಟ್ಟು ಕಾರ್ಕಳ   ಇಲ್ಲಿನ ವಿದ್ಯಾರ್ಥಿಗಳು A.B.V.P  ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು. 


ಕಾರ್ಕಳದ ಮಾನ್ಯ ತಹಶಿಲ್ದಾರರು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ ರಾಜ್ಯಸರಕಾರಕ್ಕೆ ಮುಟ್ಟಿಸುವ ಭರವಸೆ ನೀಡಿದರು. ಈ ಸಂದರ್ಭ ಮಾತನಾಡಿದ ರಾಜ್ಯಸಹಕಾರ್ಯದರ್ಶಿ ಸಂದೇಶ್ ರೈ ಅವರು ಸಮಸ್ಯೆಗೆ ರಾಜ್ಯಸರಕಾರ  ಶೀಘ್ರವಾಗಿ ಪರಿಹಾರ ಕಂಡುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಉಗ್ರಹೋರಾಟದ ಎಚ್ಚರಿಕೆ ನೀಡಿದರು.  

ಸ್ಥಳದಲ್ಲಿ ಜಿಲ್ಲಾಸಹಸಂಚಾಲಕ್ ಆಶಿಶ್.ಬೋಳ, ABVP ತಾಲೂಕು ಸಾಮಾಜಿಕ ಜಾಲತಾಣ ಪ್ರಮುಖ್ ಮನೀಶ್.ಕುಲಾಲ್, ವಿದ್ಯಾರ್ಥಿ ನಾಯಕರಾದ ಸೂರಜ್.ಪುಜಾರಿ, ರೋಷನ್.ಶೆಟ್ಟಿ ಹಾಗೂ ABVP. ಪ್ರಮುಖ ಕಾರ್ಯಕರ್ತರಾದ ಅಪರ್ಣ ಕಾರ್ಕಳ, ಅಭಿಲಾಷ್.ಕೋಟ್ಯಾನ್,ಧೀರಜ್.ರಾವ್, ಮನೋಜ್ ಇದ್ದರು.

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget