ಕಾರ್ಕಳ:ಕಳೆದ ಬಾರಿ ದೀಪಾವಳಿಯ ಪಾಡ್ಯಮಿ ದಿನದಂದು ಗಗ್ಗರ ಕಟ್ಟಿಕೊಂಡು ಮಹಾಕಾಳಿ ನೃತ್ಯ ಮಾಡಲು ಅತ್ತೂರಿನಲ್ಲಿ ಮನೆ ಮನೆ ಸುತ್ತುತ್ತಿದ್ದ ವೇಳೆ ಕಾಲಿಗೆ ಹಾವು ಕಚ್ಚಿದ ಪರಿಣಾಮ ಬಾಲಕನೋರ್ವ ಎರಡು ತಿಂಗಳುಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಇದೀಗ ಹೇಗೂ ಬದುಕಿ ಬಂದಿದ್ದಾನೆ.
ಅತ್ತೂರಿನ ಶಾಂತಕೇರಿಯ ನಲ್ಕೆ ಸಮುದಾಯದ ಯುವಕ 15 ವರ್ಷದ ರಿತೇಶ್ ಗೆ ಹಾಡು ಹಗಲೇ ಹಾವು ಕಚ್ಚಿತ್ತು.ಮಹಾಕಾಳಿ ವೇಷದಲ್ಲಿರುವಾಗ ಕಾಲಿಗೆ ಚಪ್ಪಲಿ ಹಾಕದೆ ತಿರುಗುತ್ತಿದ್ದರಿಂದ ವಿಷಕಾರಿ ಹಾವು ಕಚ್ಚಿದೆ.ಹಾವು ಕಚ್ಚಿದ ಪರಿಣಾಮವಾಗಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ರಿತೇಶ್ ಜೀವನ್ಮರಣ ಹೋರಾಟ ನಡೆಸಿ ಬದುಕುಳಿದಿದ್ದಾನೆ.

ಆದರೆ ದುರದೃಷ್ಟವಶಾತ್ ಇದೀಗ ಆತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ.ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದರೂ ಯಾವುದೇ ಫಲಕಾರಿಯಾಗಲಿಲ್ಲ.ಮೊದಲೇ ಬಡ ಕುಟುಂಬ ಮತ್ತಷ್ಟು ಸಹಾಯದ ಅನಿವಾರ್ಯತೆ ಇರುವುದರಿಂದ ರಿತೇಶ್ ನ ಮನೆಯವರು ದಾನಿಗಳ ಮೊರೆಹೋಗಿದ್ದಾರೆ.
ಸಹೃದಯ ದಾನಿಗಳು ಈ ಬಾಲಕನ ನೆರವಿಗೆ ಧಾವಿಸಿ ಬಾಲಕನ ನೆರವಿಗೆ ಧಾವಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದೆ ರಿತೇಶ್ ನ ಕುಟುಂಬ.
ರಿತೇಶ್ ಮನೆಯವರ ಸಂಪರ್ಕ ಸಂಖ್ಯೆ:
Mobile +917411745597
Post a comment