ದಿನನಿತ್ಯವು ಪೆಟ್ರೋಲ್‌ ಬೆಲೆ ಏರಿಕೆ : ಜನರ ಬದುಕು ತತ್ತರ. ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ : ಮಂಜುನಾಥ ಪೂಜಾರಿ.-Times of karkala

ಹೆಬ್ರಿ : ಕೇಂದ್ರ ಸರ್ಕಾರದ ಪ್ರತಿನಿತ್ಯವು ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಬೆಲೆಯನ್ನು ಏರಿಕೆ ಮಾಡುತ್ತಿರುವುದರಿಂದ ಜನತೆ ಭಾರಿ ಸಂಕಷ್ಟವಾಗಿದೆ. ಇದರಿಂದಾಗಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೊರೊನಾ ಸಂಕಷ್ಟದ ನಡುವೆ ದುಬಾರಿ ಬೆಲೆಯಲ್ಲಿ ಜನತೆ ಬದುಕು ಸಾಗಿಸುವುದೇ ಕಷ್ಟವಾಗಿದೆ. ಇದೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನರ ಪರವಾಗಿರುವ ಕಾಳಜಿ, ಅಚ್ಚೇ ದಿನ್.‌ ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇದ್ದರೆ ತೈಲದ ಮೇಲಿನ ತೆರಿಗೆಯನ್ನಾದರೂ ಇಳಿಸಲಿ, ತಪ್ಪಿದರೆ ಅತೀ ಶೀಘ್ರವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಕಛೇರಿಯಲ್ಲಿ ಭಾನುವಾರ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿದರು.


ಅವರು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಕಛೇರಿಯಲ್ಲಿ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಜಿಎಸ್‌ಟಿ ಬಂದರೆ ಎಲ್ಲರಿಗೂ ಒಳ್ಳೇಯದಾಗುತ್ತದೆ ಎಂದು ಹೇಳಿದರು. ಈಗ ಬದುಕೇ ದುಸ್ಥರವಾಗಿದೆ. ಅಂದು ಪ್ರಧಾನಿ ಮನಮೋಹನ್‌ ಸಿಂಗ್‌ ಗ್ಯಾಸ್‌ ಬೆಲೆ ೩೫೦ ರೂಪಾಯಿಯಿಂದ ೪೦೦ಕ್ಕೆ ಏರಿಸಿದಾಗ ಬಿಜೆಪಿ ಬಿಜೆಪಿಯವರು ಭಾರೀ ಪ್ರತಿಭಟನೆ ಮಾಡಿದ್ದರು. ಈಗ ಗ್ಯಾಸ್‌ ಬೆಲೆ ೮೫೦ ಇದೆ. ಪೇಟ್ರೋಲ್‌ ದಿನದಿನ ಏರಿಕೆಯಾಗುತ್ತಿದೆ. ಚುನಾವಣೆಗೆ ಮೊದಲು ಅತೀ ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌ ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಈಗಿನ ತೈಲ ಬೆಲೆಯ ಅರ್ಧದಷ್ಟಾದರೂ ಬೆಲೆ ನೀಡಿ ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು. 


ಉಡುಪಿ ಜಿಲ್ಲೆಯಲ್ಲೂ ಅಕ್ರಮ ಗಣಿಗಾರಿಕೆ : ರಾಜ್ಯದ ಅಕ್ರಮ ಸರ್ಕಾರದಿಂದ ಎಲ್ಲವೂ ಅಕ್ರಮವಾಗಿಯೇ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರದ ದ್ವಂದ್ವ ನೀತಿಯಿಂದಾಗಿ ಜಲ್ಲಿ ಮರಳು ಸಹಿತ ನಿರ್ಮಾಣ ಸಾಮಾಗ್ರಿಗಳ ಬೆಲೆಯೂ ದುಬಾರಿಯಾಗಿದೆ ಯಾವ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ. ಜನರ ಸಂಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ  ಎಂದು ಮಂಜುನಾಥ ಪೂಜಾರಿ ದೂರಿದರು. 


ಭಾರತದಷ್ಟು ದುಬಾರಿ ತೈಲ ಬೆಲೆ ವಿಶ್ವದಲ್ಲೇ ಇಲ್ಲ : ಭಾರತದಲ್ಲಿರುವಷ್ಟು ದುಬಾರಿ ತೈಲ ಬೆಲೆ ವಿಶ್ವದ ಎಲ್ಲಿಯೂ ಇಲ್ಲ. ಕೊರೊನಾ ಸಂಕಷ್ಟಕ್ಕಾಗಿ ವಿದೇಶಗಳಲ್ಲಿ ವಾಹನ ಜನರ ಓಡಾಟ, ವಾಹನಗಳ ಸಂಚಾರ ವಿರಳವಾದ ಹಿನ್ನಲೆಯಲ್ಲಿ ತೈಲ ಬೆಲೆಯನ್ನು ಇಳಿಸಲಾಗಿದೆ. ಆದರೆ ಜನರ ಕಷ್ಟ ಬದುಕು ಅರಿಯದ ಮೋದಿ ವಿಶ್ವದಲ್ಲೇ ಅತೀಹೆಚ್ಚು ತೈಲ ಬೆಲೆ ಮಾಡಿ ಮತ್ತೇ ದಿನದಿನವೂ ಬೆಲೆ ಏರಿಸುತ್ತಿದ್ದಾರೆ. ಕಾಂಗ್ರೆಸ್‌ ೬೦ ವರ್ಷಗಳಲ್ಲಿ ಏನು ಮಾಡಿದೆ ಎಂದು ಮೋದಿ ಪ್ರಶ್ನಿಸುತ್ತಾರೆ. ಅಂದಿನಿಂದ ಈ ತನಕ ಕಾಂಗ್ರೆಸ್‌ ಸರ್ಕಾರ ಸ್ಥಾಪನೆ ಮಾಡಿದ ವಿಮಾನ ನಿಲ್ದಾಣ, ರೈಲ್ವೆ ಸಹಿತ ಎಲ್ಲವನ್ನೂ ಮೋದಿ ಖಾಸಗಿಯವರಿಗೆ ಮಾರುತ್ತಿದ್ದಾರೆ. ಇನ್ನು ಭಾರತೀಯ ಸೇನೆಯನ್ನು ಮಾರಲು ಬಾಕಿ ಇದೆ. ಮೋದಿಗೆ ಶಾಸಕರು, ಸಂಸದರ ಖರೀದಿ, ಬೇರೆ ಪಕ್ಷದ ಸರ್ಕಾರಗಳನ್ನು ಉರುಳಿಸಲು, ಪ್ರತಿಮೆಗಳ ಸ್ಥಾಪನೆ, ಐಷಾರಾಮಿ ಜೀವನ ವ್ಯವಸ್ಥೆಗೆ ಕೇಂದ್ರದಲ್ಲಿ ಹಣವಿದೆ. ಆದರೆ ಜನರ ಸಮಸ್ಯೆಗೆ, ಬಡವರ ಪರವಾದ ಯೋಜನೆಗಳಿಗೆ ಹಣವಿಲ್ಲ. ಸಿದ್ಧರಾಮಯ್ಯ ನವರು ಬಡವರಿಗೆ ನೀಡಿದ ಅನ್ನಭಾಗ್ಯದ ಅಕ್ಕಿಯನ್ನೂ ಬಿಜೆಪಿಯವರು ಕಿತ್ತುಕೊಂಡಿದ್ದಾರೆ ಎದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್‌ ಸದಸ್ಯ ವರಂಗ ಲಕ್ಷ್ಮಣ ಆಚಾರ್‌, ಪಂಚಾಯಿತಿರಾಜ್‌ ಒಕ್ಕೂಟದ ಅಧ್ಯಕ್ಷೆ ಮುದ್ರಾಡಿ ಶಶಿಕಲಾ ಡಿ. ಪೂಜಾರಿ, ಕಾಂಗ್ರೆಸ್‌ ಕಛೇರಿಯ ಅಶ್ವಿನಿ ಮುದ್ರಾಡಿ ಸುದ್ದಿಗೋಷ್ಠಿಯಲ್ಲಿದ್ದರು. 


ಜಾಹೀರಾತು 
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget