ಬಸ್ ನಲ್ಲಿ ಯುವತಿಗೆ ಕಿರುಕುಳ ಪ್ರಕರಣ:ಆರೋಪಿಯ ಬಂಧನ ಪೋಲೀಸರ ಎದುರೇ ಆರೋಪಿಯ ಕಪಾಳಕ್ಕೆ ಬಾರಿಸಿದ ಯುವತಿ-Times of karkala

ಮಂಗಳೂರು:ದಕ್ಷಿಣ ಕನ್ನಡ ಜೆಲ್ಲೆಯ ಮಂಗಳೂರು ನಗರದಲ್ಲಿ ಕೆಲವು‌ ದಿನಗಳ ಹಿಂದೆ ಬಸ್ ನಲ್ಲಿ ಕುಳಿತ್ತಿದ್ದಾಗ ವ್ಯಕ್ತಿಯೊಬ್ಬ ಯುವತಿಗೆ ಕಿರುಕುಳ ನೀಡಿದ ಪ್ರಕರಣ  ಸಾಮಾಜಿಕ ಜಾಲತಾಣಗಳಲ್ಲಿ‌ ವೈರಲ್ ಆಗಿತ್ತು.ಈ ಪ್ರಕರಣದ ವಿಚಾರದಲ್ಲಿ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ಕಾಸರಗೋಡು ನಿವಾಸಿ ಹುಸೇನ್ ಎಂದು ತಿಳಿದು ಬಂದಿದೆ.ಕೆಲವು ದಿನಗಳ ಹಿಂದೆ ಯುವತಿಯೊಬ್ಬಳು ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಯುವತಿಯ ಪಕ್ಕದಲ್ಲಿ ಕುಳಿತ್ತಿದ್ದ ಹುಸೇನ್ ಆಕೆಗೆ‌ ಕಿರುಕುಳ ನೀಡಿದ್ದ ಎನ್ನಲಾಗಿದೆ.ನಂತರ ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡುತ್ತದ್ದ.

ನಂತರ ಕಲವೇ ಗಂಟೆಗಳಲ್ಲಿ ಈ ಕಾಮುಕನ ವಿರುದ್ಧ  ಯುವತಿಯ ಪೋಸ್ಟ್ ವೈರಲ್ ‌ಆಗಿತ್ತು.ಅದೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯ ಹಾಗೂ ಸಂತ್ರಸ್ತೆ ಯುವತಿಯ ಜೊತೆ ನಗರ ಕಮೀಷನರ್‌‌‌ ಎನ್‌‌‌‌‌. ಶಶಿಕುಮಾರ್‌ ಅವರು ಮಂಗಳೂರು ಕಮೀಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಕಮೀಷನರ್‌‌ ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಯುವತಿ ಕಾಮುಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 ಕಮೀಷನರ್ ಎನ್ ಶಶಿಕುಮಾರ್ ಅವರು ಯುವತಿಯನ್ನು ಸನ್ಮಾನಿಸಿದರು. ಹಾಗೂ ಆರೋಪಿಯ ಪತ್ತೆ ಮಾಡಿ ಬಂಧಿಸಿದ ಪೊಲೀಸ್‌ ತಂಡಕ್ಕೆ 10,000 ರೂ. ಗಳ ಬಹುಮಾನ ಘೋಷಿಸಿದರು.

ಜ.14ರ ಗುರುವಾರದಂದು ಮಧ್ಯಾಹ್ನ 3.45ರ ಸುಮಾರಿಗೆ ಯುವತಿಯೊಬ್ಬಳು ಖಾಸಗಿ ಬಸ್‌ನಲ್ಲಿ ದೇರಳಕಟ್ಟೆಯಿಂದ ಪಂಪ್‌ವೆಲ್‌ಗೆ ತೆರಳುತ್ತಿದ್ದರು. ಈ ಸಂದರ್ಭ ಆಕೆಯ ಪಕ್ಕ ಕುಳಿತ ಸಹ ಪ್ರಯಾಣಿಕನೋರ್ವ ಆಕೆಯ ದೇಹ ಸ್ಪರ್ಶಿಸಲು ಆರಂಭಿಸಿದ್ದಾನೆ. ಈ ವೇಳೆ ಆಕೆ ವಿರೋಧ ವ್ಯಕ್ತಪಡಿಸಿದರೂ ಬಸ್‌ನಲ್ಲಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಆಕೆಯ ಬೆಂಬಲಕ್ಕೆ ಮುಂದಾಗಿರಲಿಲ್ಲ. ಬಳಿಕ ಯುವತಿ ಈ ಘಟನೆಯ ಬಗ್ಗೆ ಇನ್‌‌ಸ್ಟಾಗ್ರಾಂನಲ್ಲಿ ಪೋಸ್ಟ್‌‌ ಮಾಡಿದ್ದರು.

ಈ ಪೋಸ್ಟ್‌ ಅನ್ನು ಓದುವ ಮಹಿಳೆಯರು ಅಥವಾ ಪುರುಷರು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೋಸ್ಟ್‌‌ ಅನ್ನು ಶೇರ್‌ ಮಾಡಿ. ಇದರಿಂದ ಈ ರೀತಿಯಾದಲ್ಲಿ ಮಹಿಳೆಯರು ಅಥವಾ ಹುಡುಗಿಯರು ಮೌನವಾಗಿರುವ ಬದಲು ಧ್ವನಿ ಎತ್ತುತ್ತಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದರು.

ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget