ಕಾರ್ಕಳ:ಕೃಷಿ ಮತ್ತು ಹೈನುಗಾರಿಕೆ ಉತ್ತೇಜನ ಕಾರ್ಯಾಗಾರ-Times of karkala

 ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಲು ಉತ್ಪಾದಕರ ಸಹಕಾರ ಸಂಘ(ರಿ) ಸಾಣೂರು, ಯುವಕ ಮಂಡಲ (ರಿ) ಸಾಣೂರು, ಈಸಿ ಲೈಫ್ ಎಂಟರ್ಪ್ರೈಸಸ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ಮತ್ತು ಹೈನುಗಾರಿಕೆ ಉತ್ತೇಜನ ಕಾರ್ಯಾಗಾರವನ್ನು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ರೋಟರಿ ಜಿಲ್ಲಾ ಗವರ್ನರ್ ರೊ.ಎಂ ಪಿ ಹೆಚ್ ಎಫ್ ರಾಜಾರಾಮ್ ಭಟ್ ರವರು ದೀಪ ಪ್ರಜ್ವಲನ ಗೊಳಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದೇಂದಬೆಟ್ಟುಇದರ ಪ್ರಧಾನ ಅರ್ಚಕರಾದ ಶ್ರೀ ವೇದಮೂರ್ತಿ ಶ್ರೀರಾಮ್ ಭಟ್ ಇವರು  ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರೋಟೇರಿಯನ್ ಪ್ರಶಾಂತ್ ಬೆಳಿರಾಯ, ರೊ. ಪಿಡಿಜಿ ಡಾ. ಭರತೇಶ ಆದಿರಾಜ್,  ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ರಿ) ಇದರ ನಿರ್ದೇಶಕರಾದ ಶ್ರೀ ನರಸಿಂಹ ಕಾಮತ್ ,ಸಂಪನ್ಮೂಲ ವ್ಯಕ್ತಿ ಡಾ. ಎಸ್ ಪಿ ಶೀತಲ್ ಕುಮಾರ್ ಪಶುವೈದ್ಯಾಧಿಕಾರಿಗಳು ಕಾರ್ಕಳ, ಯುವಕ ಮಂಡಲ (ರಿ) ಇದರ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಇವರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಯುವ ಕೃಷಿಕ ಶ್ರೀ ಅರುಣ್ ಡಿ'ಸಿಲ್ವಾ  ರವರನ್ನು ಸಮಸ್ತರ ಪರವಾಗಿ ಮುಖ್ಯ ಅತಿಥಿಗಳು ಸನ್ಮಾನಿಸಿದರು.ಸ್ಥಳೀಯ ಗ್ರಾಮ ಪಂಚಾಯತಿನ 18 ಚುನಾಯಿತ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸುಮಾರು ಒಂದು ನೂರಕ್ಕೂ ಹೆಚ್ಚಿನ ಫಲಾನುಭವಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ 'ಈಸಿ ಲೈಫ್ ಎಂಟರ್ಪ್ರೈಸಸ್ 'ರವರು ನಡೆಸಿಕೊಟ್ಟ ಪ್ರಾತ್ಯಕ್ಷಿಕೆಯೊಂದಿಗೆ ಕಾರ್ಯಾಗಾರದ ಉಪಯೋಗವನ್ನು ಪಡೆದರು.


ಜಾಹೀರಾತು 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget