ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಂಧರ್ಭ ಏಕಾ ಏಕಿ ಬ್ರೇಕ್ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಪಲ್ಟಿಯಾದ ಘಟನೆ ಕಾರ್ಕಳ ತೆಳ್ಳಾರು ರಸ್ತೆಯಲ್ಲಿರುವ ರಾಘವೇಂದ್ರ ಮಠದ ಬಳಿ ನಡೆದಿದೆ.
ದಿನಾಂಕ 07/01/2021 ರಂದು ಸಂಜೆ 6:30 ಗಂಟೆಗೆ ಶ್ರೀಮತಿ ಅಮಿತಾ ರವರು ಕಾರ್ಕಳದಿಂದ KA-20-D-7051 ನೇ ನೊಂದಣಿ ಸಂಖ್ಯೆಯ ಅಟೋರಿಕ್ಷಾದಲ್ಲಿ ನಿಟ್ಟೆ ಗಾಜ್ರಿಯ ಆಸ್ಪತ್ರೆಗೆ ಬರುತ್ತಿರುವ ಸಂಧರ್ಭದಲ್ಲಿ ತೆಳ್ಳಾರು ರಸ್ತೆಯಲ್ಲಿರುವ ರಾಘವೇಂದ್ರ ಮಠದ ಬಳಿ ತಲುಪುವಾಗ ಅಟೋ ರಿಕ್ಷಾವನ್ನು ಅದರ ಚಾಲಕ ವೀರಚಂದ್ರ ಹೆಗ್ಡೆಯವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ರಸ್ತೆಯ ಎಡ ಬದಿಯಿಂದ ಬಂದ ದನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಏಕಾಏಕೀ ಬ್ರೇಕ್ ಹಾಕಿದ್ದಾರೆ.
ಇದರ ಪರಿಣಾಮ ಅಟೋ ರಿಕ್ಷಾ ಮಗುಚಿ ಬಿದ್ದು,ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಅಮಿತಾರವರರಿಗೆ ಗಾಯಗಳಾಗಿವೆ. ಅಟೋ ರಿಕ್ಷಾ ಚಾಲಕ ವೀರಚಂದ್ರ ಹೆಗ್ಡೆ ಇವರ ಅತೀ ವೇಗ ಹಾಗೂ ನಿರ್ಲಕ್ಷತದ ಚಾಲನೆಯೇ ಇದಕ್ಕೆ ಕಾರಣ ಎಂದು ಅಮಿತಾರವರು ದೂರು ನೀಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.
ಜಾಹೀರಾತು
Post a comment