ಹೆಬ್ರಿ:ಹೆಬ್ರಾಯ್ ಮತ್ತು ಸೀತಾನದಿ ಸೌಖ್ಯಯೋಗ ಟ್ರಸ್ಟ್ ವಾರ್ಷಿಕೋತ್ಸವ ಸಂಭ್ರಮ : ಸೈಕಲ್ ಜಾಥಾ- ಸೈಕಲ್ ಸವಾರರ ಸನ್ಮಾನ.
"ಆರೋಗ್ಯ ಪೂರ್ಣ ಜನತೆ ನಮ್ಮ ದೇಶದ ಸಂಪತ್ತು"-ಡಾ.ಗಣಪತಿ.
ಹೆಬ್ರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಧಾಕೃಷ್ಣ ನಾಯಕ್ ವೇದಿಕೆಯಲ್ಲಿ ಭಾನುವಾರ ನಡೆದ ಸೀತಾನದಿ ಸೌಖ್ಯಯೋಗ ಟ್ರಸ್ಟ್ ಮತ್ತು ಹೆಬ್ಬೇರಿ ಬೈಸಿಕಲ್ ಆರ್ಗನೈಸೇಶನ್ ಆಪ್ ಇಂಡಿಯಾ-ಹೆಬ್ರಾಯ್ ವಾರ್ಷಿಕೋತ್ಸವ ಸಂಭ್ರಮದಲ್ಲಿ ಹೆಬ್ರಿ ತಾಲ್ಲೂಕಿನ ಪ್ರಥಮ ತಹಶೀಲ್ಧಾರ್ ಆಗಿ ಸೇವೆ ವರ್ಗಾವಣೆಗೊಂಡು ಇದೀಗ ಸಹಾಯಕ ಆಯುಕ್ತರಾಗಿ ಪದೋನ್ನತಿ ಹೊಂದಿದ ಬೆಂಗಳೂರಿನ ಕೆ. ಮಹೇಶ್ ಚಂದ್ರ ಅವರನ್ನು ಸನ್ಮಾನಿಸಲಾಯಿತು.
ಹೆಬ್ರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಧಾಕೃಷ್ಣ ನಾಯಕ್ ವೇದಿಕೆಯಲ್ಲಿ ಭಾನುವಾರ ನಡೆದ ಸೀತಾನದಿ ಸೌಖ್ಯಯೋಗ ಟ್ರಸ್ಟ್ ಮತ್ತು ಹೆಬ್ಬೇರಿ ಬೈಸಿಕಲ್ ಆರ್ಗನೈಸೇಶನ್ ಆಪ್ ಇಂಡಿಯಾ-ಹೆಬ್ರಾಯ್ ವಾರ್ಷಿಕೋತ್ಸವ ಸಂಭ್ರಮದಲ್ಲಿ ಹೆಬ್ರಿಯ ವಿವಿದೆಡೆ ನಡೆದ ಬೃಹತ್ ಸೈಕಲ್ ಜಾಥಾಕ್ಕೆ ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ. ಚಾಲನೆ ನೀಡಿದರು.
ನಮ್ಮ ದೇಶದ ೧೩೦ ಕೋಟಿ ಜನ ದೇಶದ ಸಂಪತ್ತಾಗಿ ರೂಪುಗೊಳ್ಳಬೇಕು, ಆಗ ಮಾತ್ರ ಸದೃಡ ಭಾರತದ ನಿರ್ಮಾಣವಾಗುತ್ತದೆ. ಆರೋಗ್ಯಪೂರ್ಣ ಜನತೆಗೆ ನಮ್ಮ ದೇಶದ ನಿಜವಾದ ಸಂಪತ್ತು, ಆ ನಿಟ್ಟಿನಲ್ಲಿ ನಮ್ಮ ಆರೋಗ್ಯದ ಕಡೆಗೆ ನಾವೇ ಗಮನ ನೀಡಬೇಕಾಗಿದೆ. ಸೈಕಲ್ ಸವಾರಿ ಒಳ್ಳೇಯ ಆರೋಗ್ಯಕ್ಕೆ ದಾರಿದೀಪ ಎಂದು ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಎಚ್.ಎ. ಹೇಳಿದರು.
ಅವರು ಹೆಬ್ರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಧಾಕೃಷ್ಣ ನಾಯಕ್ ವೇದಿಕೆಯಲ್ಲಿ ಭಾನುವಾರ ನಡೆದ ಸೀತಾನದಿ ಸೌಖ್ಯಯೋಗ ಟ್ರಸ್ಟ್ ನ ೪ನೇ ಮತ್ತು ಸ್ವಸ್ಥ ಸಮಾಜದಿಂದ ಬಲಿಷ್ಠ ಭಾರತದ ಹೊಣೆಹೊತ್ತ ಹೆಬ್ಬೇರಿ ಬೈಸಿಕಲ್ ಆರ್ಗನೈಸೇಶನ್ ಆಪ್ ಇಂಡಿಯಾ-ಹೆಬ್ರಾಯ್ ಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಬೆಂಗಳೂರು ಸೋಹಮ್ ವೆಲ್ನೆಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ನರೇಂದ್ರ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಎಂದರು.
ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಸಂತೋಷ್ ಕುಮಾರ್ ಮಾತನಾಡಿ ಕೋವಿಡ್ ೧೯ರ ನಿಯಮವನ್ನು ಎಲ್ಲರೂ ಸರಿಯಾಗಿ ಪಾಲಿಸಿ ಕೊರೊನಾ ಮುಕ್ತ ಹೆಬ್ರಿಯ ಮೂಲಕ ಭಾರತದಿಂದ ಕೊರೊನಾವನ್ನು ದೂರ ಮಾಡೋಣ ಎಂದರು.
ಹೆಬ್ರಿ ತಾಲ್ಲೂಕಿನ ಪ್ರಥಮ ತಹಶೀಲ್ಧಾರ್ ಆಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹೆಬ್ರಾಯ್ ಸದಸ್ಯ ಕೆ. ಮಹೇಶಚಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿ ಹೆಬ್ರಿ ಜನತೆ ನೀಡಿದ ಪ್ರೀತಿ ಗೌರವಕ್ಕೆ ಋಣಿಯಾಗಿದ್ದೇನೆ ಎಂದರು.
ಮುಂಜಾನೆ ನಡೆದ ಬೃಹತ್ ಸೈಕಲ್ ಜಾಥಾಕ್ಕೆ ಹೆಬ್ರಿ ತಹಶೀಲ್ಧಾರ್ ಕೆ. ಪುರಂದರ್ ಚಾಲನೆ ನೀಡಿದರು. ಜೀವನವಿಡಿ ಸೈಕಲ್ ನಲ್ಲೇ ಸಂಚರಿಸಿ ಜೀವನಸಾಧನೆ ಮಾಡಿದ ಸಾಧಕರು ಮತ್ತು ಸೈಕಲ್ ರಿಪೇರಿ ಮಾಡುವ ಅಂಗಡಿಯವರ ಸನ್ಮಾನ, ಹೆಬ್ರಾಯ್ ಸದಸ್ಯರಿಗೆ ಆತಿಥ್ಯ ನೀಡಿದ ಗಣ್ಯರಿಗೆ ಗೌರವಾರ್ಪಣೆ ನಡೆಯಿತು. ಹೆಬ್ರಾಯ್ ನೂತನ ಪದಾಧಿಕಾರಿಗಳ ಪದಪ್ರದಾನ ನಡೆಯಿತು. ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ವಿಲ್ಫ್ರೆಡ್ ಡಿಸೋಜ, ಉದ್ಯಮಿ ಹರ್ಷ ಶೆಟ್ಟಿ,ಹೆಬ್ರಾಯ್ ಗೌರವಾಧ್ಯಕ್ಷ ಡಾ.ರಾಮಚಂದ್ರ ಭಟ್ ಇದ್ದರು.
ಹೆಬ್ರಾಯ್ ಕಾರ್ಯದರ್ಶಿ ದಿನಕರ ಪ್ರಭು ಸ್ವಾಗತಿಸಿ ಶಿಕ್ಷಕ ನಿತ್ಯಾನಂದ ಶೆಟ್ಟಿ ನಿರೂಪಿಸಿದರು.
ಜಾಹೀರಾತು
Post a comment