ಕಾರ್ಕಳ ಸರಕಾರಿ ಆಸ್ಪತ್ರೆಯ ಸಿಬ್ಬಂದಿಯೋರ್ವರಿ೦ದ ಹಿಂದೂಗಳ ಧಾರ್ಮಿಕ ಭಾವನೆಗೆ ಅಡ್ಡಿ: ಆರೋಪ-Times of karkala

ಕಾರ್ಕಳ: ಕಾರ್ಕಳ ತಾಲೂಕು ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕಿಯೊಬ್ಬರು ತಾವು ವಾಸವಿದ್ದ ಸರಕಾರಿ ಕ್ವಾಟ್ರಸ್‌ನ ಮುಂಭಾಗದಲ್ಲಿದ್ದ ತುಳಸಿ ಕಟ್ಟೆಯನ್ನು ಧ್ವಂಸಗೊಳಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.


ಸರಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕಿ ಎಲಿಯಮ್ಮ ಎಂಬವರು ಇತ್ತೀಚೆಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ವರ್ಗಾವಣೆಯಾಗಿ ತಮ್ಮ ಕುಟುಂದೊAದಿಗೆ ಆಸ್ಪತ್ರೆಯ ಹಿಂಬದಿಯಲ್ಲಿನ ಸರಕಾರಿ ಕ್ವಾಟ್ರಸ್‌ನಲ್ಲಿ ವಾಸವಿದ್ದು, ತಮ್ಮ ಅಂಗಳದಲ್ಲಿದ್ದ ತುಳಸಿಕಟ್ಟೆಯನ್ನು ಹೊರಗಡೆ ಎಸೆದಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗುಡ್ಡೆಯಂಗಡಿ ಫ್ರೆಂಡ್ಸ್ ತಂಡ ಹಾಗೂ ಬಜರಂಗದಳ ಕಾರ್ಯಕರ್ತರು ಅವರ ಈ ಕೃತ್ಯವನ್ನು ಖಂಡಿಸಿ ಅವರನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಾವು ಸರಕಾರಿ ಉದ್ಯೋಗಿಯಾಗಿದ್ದು ಅನ್ಯಧರ್ಮದವರ ಭಾವನೆಗೆ ಧಕ್ಕೆ ಉಂಟುಮಾಡಿರುವುದು ಸರಿಯಲ್ಲ, ನೀವು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವವರು ಹೀಗೆ ನಡೆದುಕೊಂಡರೆ ಆಸ್ಪತ್ರೆಗೆ ಬರುವ ಇತರೆಏ ಧರ್ಮದವರನ್ನು ಯಾವ ದೃಷ್ಟಿಯಲ್ಲಿ ಚಿಕಿತ್ಸೆ ನೀಡುತ್ತೀರಿ ಎಂದು ಕಾರ್ಯಕರ್ತರು ಎಲಿಯಮ್ಮ ಅವರನ್ನು ಪ್ರಶ್ನಿಸಿದ ಪ್ರಸಂಗವೂ ನಡೆಯಿತು.

ತಮ್ಮ ಕಾರು ನಿಲ್ಲಿಸಲು ಸ್ಥಳವಿರಲಿಲ್ಲ ಹಾಗಾಗಿ ತುಳಸಿಕಟ್ಟೆಯನ್ನು ತೆಗೆದು ಬದಿಗೆ ಇರಿಸಿದ್ದು ನಿಜ ಇದರಲ್ಲಿ ಬೇರೆ ಉದ್ದೇಶವಿರಲಿಲ್ಲ ಎಂದು ಈ ಘಟನೆಗೆ ಎಲಿಯಮ್ಮ ಹಾಗೂ ಅವರ ಪತಿ ಸ್ಪಷ್ಟನೆ ನೀಡಲು ಮುಂದಾದಾಗ ನೀವು ಪಕ್ಕದಲ್ಲಿದ್ದ ವಾಸ್ತವ್ಯದ ರೂಮಿನ ಮುಂಭಾಗದಲ್ಲಿದ್ದ ತುಳಸಿಕಟ್ಟೆಯನ್ನು ಕೂಡ ಧ್ವಂಸ ಮಾಡಿದ್ದೀರಿ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ,ನಂತರ ಈ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿ ತುಳಸಿಕಟ್ಟೆಯನ್ನು ಮತ್ತೆ ಕಟ್ಟಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಗುಡ್ಡೆಯಂಗಡಿ ಫ್ರೆಂಡ್ಸ್ನ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಇಂತಹ ಘಟನೆಗಳಿಂದ ಧಾರ್ಮಿಕ ಸಾಮರಸ್ಯ ಹದಗೆಡುತ್ತದೆ ಎನ್ನುವ ಸೂಕ್ಷ್ಮತೆಯನ್ನು  ಅರಿತು ವರ್ತಿಸಿದರೆ ಎಂದಿಗೂ ಇಂತಹ ಗೊಂದಲ ಅಶಾಂತಿ ಸೃಷ್ಟಿಯಾಗಲು ಸಾಧ್ಯವಿಲ್ಲ.


ಜಾಹೀರಾತು 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget