ಹೆಬ್ರಿ : ಶಿಕ್ಷಣವೇ ಕುಟುಂಬಕ್ಕೆ ಆಧಾರ ಶಕ್ತಿ, ಶಿಕ್ಷಣ ಬಡವರ ಪಾಲಿಗೆ ವರದಾನ, ಬಡವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹತ್ವದ ಉದ್ದೇಶದಿಂದ ನಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾ ನೀಡಲು ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ಬಂಟ ಸಮುದಾಯದವರು ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಬ್ಯಾಸ ನೀಡಬೇಕು ಎಂದು ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಮುನಿಯಾಲು ದಿವಾಕರ ವೈ ಶೆಟ್ಟಿ ಹೇಳಿದರು.
ಅವರು ಭಾನುವಾರ ಮುನಿಯಾಲು ಮಾರಿಯಮ್ಮ ದೇವಸ್ಥಾನದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
![]() |
ಹೆಬ್ರಿ ಸಮೀಪದ ಮುನಿಯಾಲು ಬಂಟರ ಸಂಘದ ವತಿಯಿಂದ ಮಂಗಳವಾರ ವಿದ್ಯಾರ್ಥಿ ವೇತನ ವಿತರಿಸಲಾಯಿತು. |
ಹೆಬ್ರಿ ಬಂಟರ ಸಂಘದ ಮಾಜಿ ಕೋಶಾಧಿಕಾರಿ ನೀರೆ ಕೃಷ್ಣ ಶೆಟ್ಟಿ, ಮುನಿಯಾಲು ಬಂಟರ ಸಂಘದ ಶಂಕರ ಶೆಟ್ಟಿ, ನಿತೀಶ್ ಶೆಟ್ಟಿ, ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿದರು.
ಮುನಿಯಾಲು ಸುಜಯ ಶೆಟ್ಟಿ, ಪಮ್ಮೊಟ್ಟು ಸುಂದರ ಶೆಟ್ಟಿ, ಸುರೇಂದ್ರ ಶೆಟ್ಟಿ, ಜಗದೀಶ ಹೆಗ್ಡೆ, ಖಜಾನೆ ಸಂದೇಶ ಶೆಟ್ಟಿ, ಪಡುಕುಡೂರು ಅಶೋಕ ಶೆಟ್ಟಿ, ಸುಹಾಸ್ ಶೆಟ್ಟಿ, ಸಮೃದ್ಧಿ ಪ್ರಕಾಶ ಶೆಟ್ಟಿ, ಮುನಿಯಾಲು ಸುಂದರ ಶೆಟ್ಟಿ, ಚಾರ ಭಾಸ್ಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಜಾಹೀರಾತು
Post a comment