ಬಜಗೋಳಿ ಮುಡಾರು ದಿಡಿಂಬಿರಿ ಶೀ ಅಯ್ಯಪ್ಪ ಸ್ವಾಮಿ ಮಂದಿರ:ಶ್ರೀ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ
ಬಜಗೋಳಿ ಮುಡಾರು ದಿಡಿಂಬಿರಿ ಶೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಲುವಾಗಿ ಪೊಡಿಯ ಗುರುಸ್ವಾಮಿ ವೇದಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ತಿನ ಮುಖ್ಯಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ "ಅಯ್ಯಪ್ಪ ಸ್ವಾಮಿಯ ಆರಾಧನೆಯಲ್ಲಿ ಪ್ರಕೃತಿಯ ತತ್ವ ಇದೆ, ಸಾಮಾರಸ್ಯ ಸಾರುವ ಸಂಕೇತದ ಮೂಲಕ ಜಾತ್ಯತೀತ ಮನೋಧರ್ಮ ಹುದುಗಿದೆ. 48 ದಿನಗಳ ವೃತ್ತಾಚರಣೆ ಆರಾಧನೆಯಿಂದ ಸತ್ಯ-ಸತ್ವಗಳನ್ನು ಅರಿತುಕೊಳ್ಳಬಹುದು.ಇತರ ದೇಶದ ಧರ್ಮ ಆಚರಣೆಗಿಂತ ಭಾರತದಲ್ಲಿ ನಡೆಯುತ್ತಿರುವ ಧರ್ಮ ಆಚರಣೆಯು ಹೆಚ್ಚು ವೈಜ್ಞಾನಿಕತೆಯಿಂದ ಕೂಡಿದೆ. ರಾಷ್ಟ್ರಭಕ್ತಿ,ದೇಶ ಪ್ರೇಮ,ನಂಬಿಕೆ, ಭಾರತದ ಆಸ್ಮಿತೆಗೆ ತೊಂದರೆ ಆದಲ್ಲಿ ಸಹಿಲಾಗದ ಮನೋಧರ್ಮ ನಮ್ಮದಾಗಿದೆ" ಎಂದು ಹೇಳಿದರು.
ನ್ಯಾಯವಾದಿ ಎಂ.ಕೆ.ವಿಜಯಕುಮಾರ್ ಮಾತನಾಡಿ, "ವಿಶ್ವದ ಅತೀ ಹೆಚ್ಚು ಧರ್ಮಗಳು ಹುಟ್ಟಿಕೊಂಡಿರುವುದು ಭಾರತದಲ್ಲಿ ಆಗಿದೆ. ಇಲ್ಲಿ ಹುಟ್ಟಿಕೊಂಡಿರುವ ಧರ್ಮಗಳೆಲ್ಲವೂ ಸನಾತನದಿಂದ ಪ್ರೇರಿತವಾದುದಾಗಿದೆ. ವಿಶ್ವದಲ್ಲಿ ಸನಾತನ ಹಿಂದು ಧರ್ಮವೇ ಪ್ರಬಲವಾಗಿದೆ" ಎಂದು ಹೇಳಿದ್ದಾರೆ.
ಇನ್ನು ಮುಡ್ರಾಲು ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯವರ್ಮ ಹೆಗ್ಡೆ ಬಹುಮಾನ ವಿತರಿಸಿ,
ಶ್ರೀಕಾಂತ್ ಶೆಟ್ಟಿ ಧಾರ್ಮೀಕ ಉಪನ್ಯಾಸ ನೀಡಿದರು.
ಪ್ರೇಮಶೆಟ್ಟಿ ಅಧ್ಯಕ್ಷತೆವಹಿಸಿದ್ದು, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕ ಸುನೀಲ್ಕುಮಾರ್, ಬಾರತೀಯ ಸೇನೆಯ ಯೋಧ ಸುನೀಲ್ ವಿ.ಮರಾಠೆ, ಈದು ಬಿಲ್ಲವ ಸಂಘದ ಅಧ್ಯಕ್ಷ ಜಗದೀಶ್ ಅಂಚನ್,ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್, ಉದ್ಯಮಿಗಳಾದ ಶ್ಯಾಮ್ ಶೆಟ್ಟಿ, ಉದಯ ಸಾಲಿಯಾನ್, ಸುಧಾಕರ ಮಡಿವಾಳ, ಸುಂದರ ಬಂಡಾರಿ, ದೈವನರ್ತಕ ಪೂವಪ್ಪ ಪರವ, ಸತ್ಯಸಾರಮಾಣಿ ದೈವಸ್ಥಾನದ ಅಧ್ಯಕ್ಷ ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು.
ಜಾಹೀರಾತು
Post a comment