ಹಿಂದೂ ದೇವರುಗಳ ಬಗ್ಗೆ ಅಪಪ್ರಚಾರ ಮಾಡಿರುವ ಆರೋಪದಲ್ಲಿ ತಾಂಡವ್ ವೆಬ್ಸೀರೀಸ್ನ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಹಾಗೂ ಬರಹಗಾರ ಗೌರವ್ ಸೋಲಂಕಿ ವಿರುದ್ದ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ.
ಒರಿಜಿನಲ್ ಕಂಟೆಂಟ್ಗಾಗಿ ಅಮೇಜಾನ್ ಪ್ರೈಮ್ನ ಭಾರತದ ಮುಖ್ಯಸ್ಥ ಅಪರ್ಣ ಪುರೋಹಿತ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ ಹಾಗೂ ಇನ್ನಿತರ ಅನಾಮಧೇಯ ವ್ಯಕ್ತಿಗಳ ಮೇಲೆ ಉತ್ತರ ಪ್ರದೇಶದ ಹಜರತ್ ಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಮರ್ ನಾಥ್ ಯಾದವ್ ಅವರು ಎಫ್ಐಆರ್ ದಾಖಲಿಸಿದ್ದು, ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಧಾರ್ಮಿಕ ಸೌರ್ಹಾದಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ಈ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತರು, ಎಫ್ಐಆರ್ನಲ್ಲಿ ಹೆಸರು ಉಲ್ಲೇಖಿಸಲಾಗಿರುವ ವ್ಯಕ್ತಿಗಳ ತನಿಖೆ ನಡೆಸಲು ಹಜರತ್ ಗಂಜ್ನ ಪೊಲೀಸ್ ಠಾಣೆಯ ತಂಡ ಮುಂಬೈಗೆ ತೆರಳಲಿದೆ ಎಂದು ತಿಳಿಸಿದ್ದಾರೆ.
ಜಾಹೀರಾತು
Post a comment