ಹೆಬ್ರಿ:ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕ ಮತ್ತು ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಆಶ್ರಯ ದಲ್ಲಿ ವಿದ್ಯಾಭಾರತಿ ಸಂಯೋಜಿತ ಉಡುಪಿ ಜಿಲ್ಲಾ ವಿದ್ಯಾಭಾರತಿ ಸಂಸ್ಥೆಗಳ ಎಲ್ ಕೆಜಿ, ಯುಕೆಜಿ,೧ ಮತ್ತು ೨ನೇ ತರಗತಿಯ ಶಿಕ್ಷಕರಿಗೆ ೧ ದಿನದ ' ಜಿಲ್ಲಾ ಶಿಶು ವಾಟಿಕಾ ಶಿಕ್ಷಕರ ಪ್ರಶಿಕ್ಷಣ ವರ್ಗ ' ವು ಹೆಬ್ರಿ ಅಮೃತ ಭಾರತಿಯ ಅನ್ನಪೂರ್ಣ ಸಭಾಂಗಣ ದಲ್ಲಿ ಇತ್ತೀಚೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ ವಹಿಸಿದ್ದರು.
ವಿದ್ಯಾಭಾರತಿಯ ಸಂಪನ್ಮೂಲ ವ್ಯಕ್ತಿ ಅನ್ನಪೂರ್ಣ ಶಿವಮೊಗ್ಗ ' ಬುನಾದಿ ಶಿಕ್ಷಣ 'ವಿಷಯದ ಕುರಿತು, ನಮೂನರೂಪ ಶಿಕ್ಷಣ' ಮತ್ತು ' ಪಾಲಕರಿಗೆ ಶಿಕ್ಷಣ ' ಎಂಬ ವಿಷಯದ ಕುರಿತು ಶಿಶು ಶಿಕ್ಷಣ ಪ್ರಮುಖ್, ಪ್ರಾಂತ ಶಿಶು ವಾಟಿಕಾ ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರ ಬೌದ್ಧಿಕ ತಾರಾ ಹಾಗೂ ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ '' ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಶು ಶಿಕ್ಷಣ ' ಬಗ್ಗೆ ಮಾಹಿತಿ ನೀಡಿದರು.
ಹೆಬ್ರಿ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶಿಶು ಶಿಕ್ಷಣ ಪ್ರಮುಖ್ ಅನಸೂಯ ತೆಕ್ಕಟ್ಟೆ ಇದ್ದರು.
ನಾಗವೇಣಿ ವಂದಿಸಿ ಗುಣವತಿ ಮತ್ತು ಅನಿತಾ , ಅಕ್ಷತಾ , ರಾಜೇಶ್ವರಿ ನಿರೂಪಿಸಿದರು.
ಜಾಹೀರಾತು
Post a comment