ಖಾಸಗಿ ಕಾಲೇಜಿನ ಉಪನ್ಯಾಸಕ ನೇಣು ಬಿಗಿದು ಆತ್ಮಹತ್ಯೆ .
ಹೆಬ್ರಿಯ ಬಡ ಗುಡ್ಡೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಖಾಸಗಿ ಕಾಲೇಜಿನ ಉಪನ್ಯಾಸಕ ವೆಂಕಟೇಶ್ ಎಂಬುವರು .ಇಂದು ಬೆಳಿಗ್ಗೆ ಮನೆಯ ಕೊಠಡಿಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಇವರು ಮೂಲತಃ ರೋಣದ ನಿವಾಸಿ .ಇವರು ಶಿರಸಿ ಮೂಲದ ಯುವತಿಯನ್ನು ಪ್ರೀತಿಸಿ 5ವರ್ಷದ ಹಿಂದೆ ವಿವಾಹಿತರಾಗಿದ್ದು .ಆದರೆ ಇವರ ಹಾಗೂ ಯುವತಿಯ ಮನೆಯವರಿಗೆ ಇವರಿಬ್ಬರು ಮದುವೆಯಾದ ವಿಷಯ ಗೊತ್ತಿಲ್ಲ ಎಂದು ತಿಳಿದುಬಂದಿದೆ .
ಪತ್ನಿಯೊಂದಿಗೆ ಹೆಬ್ರಿಯಲ್ಲಿ ಬಾಡಿಗೆ ಮನೆಯಲ್ಲಿ ಅನ್ನೋನ್ಯವಾಗಿ ವಾಸಿಸುತ್ತಿದು. ಇವರ ಪತ್ನಿ ಹೆಬ್ರಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾದ ವೆಂಕಟೇಶ್ ಇವರು ಹಿಂದೆ ಮೂಡಬಿದಿರೆಯಲ್ಲಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದರು.ಆದರೆ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಹೆಬ್ರಿಯ ಬಾಡಿಗೆ ಮನೆಯಲ್ಲಿದ್ದರು .ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ .ಸ್ಥಳಕ್ಕೆ ಹೆಬ್ರಿ ಪೊಲೀಸ್ ಠಾಣಾ ಅಧಿಕಾರಿ ಸುಮಾ ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ .ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ ಮುಂದಿನ ಪೊಲೀಸ್ ತನಿಖೆ ವೇಳೆ ತಿಳಿಯಬೇಕಾಗಿದೆ .
Post a comment