![]() |
ಸಾಂಧರ್ಬಿಕ ಚಿತ್ರ |
ದಿನಾಂಕ 17/01/2021 ರಂದು ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಸುಮ ಬಿ.ರವರು ರೌಂಡ್ಸ್ ನಲ್ಲಿದ್ದಾಗ ಸಂತೋಷ್ ಗೌಡರವರು ಪರವಾನಿಗೆಯಿಲ್ಲದೆ ಬಂದೂಕು ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಚಾರಣೆಗೆ ತೆರಳಿದಾಗ ಪೊಲೀಸರನ್ನು ಕಂಡು ಆರೋಪಿ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಕೂಡಲೇ ಸಿಬ್ಬಂದಿಯವರ ಸಹಾಯದಿಂದ ಅರೋಲಿಯನ್ನು ಹಿಡಿದು ವಿಚಾರಿಸಿದಾಗ ಪರವಾನಿಗೆ ಇಲ್ಲದೆ ಬಂದೂಕು ಬಳಸುತ್ತಿದ್ದದ್ದು ಬೆಳಕಿಗೆ ಬಂದಿದೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2021 ಕಲಂ: 3(1), 25 ಭಾರತೀಯ ಶಸ್ತ್ರಾಸ್ತ್ರ ಕಾಯಿದೆ 1959 ರಂತೆ ಪ್ರಕರಣ ದಾಖಲಾಗಿದೆ.
ಹೆಬ್ರಿ: ದಿನಾಂಕ 17/01/2021 ರಂದು ಸುಮ.ಬಿ, ಪೊಲೀಸ್ ಉಪನಿರೀಕ್ಷಕರು ಹೆಬ್ರಿ ಪೊಲೀಸ್ ಠಾಣೆ ಇವರು ರೌಂಡ್ಸ್ ನಲ್ಲಿರುವಾಗ ಮುದ್ರಾಡಿ ಗ್ರಾಮದ ಬಲ್ಲಾಡಿ ಪರಂಗಿಬೈಲು ನಿವಾಸಿ ಸಂತೋಷ ಗೌಡ ಎಂಬಾತ ಯಾವುದೇ ಪರವಾನಿಗೆಯಿಲ್ಲದೇ ಅಕ್ರಮವಾಗಿ ಕೋವಿಯನ್ನು ಹೊಂದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಬಲ್ಲಾಡಿ ರಸ್ತೆಯಲ್ಲಿ ಹೋಗಿ ಬೆಳಿಗ್ಗೆ 11:00 ಗಂಟೆಗೆ ಬೆಂಡುಗುಡ್ಡೆ ತಲುಪಿದಾಗ ಸಂತೋಷ ಗೌಡ ಬೆಂಡುಗುಡ್ಡೆಯಿಂದ ಪರಂಗಿಬೈಲು ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಕೋವಿಯನ್ನು ಹಿಡಿದುಕೊಂಡು ಹೋಗುತ್ತಿದ್ದವನು ಸಮವಸ್ತ್ರದಲ್ಲಿದ್ದವರನ್ನು ಹಾಗೂ ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ ಸಿಬ್ಬಂದಿಯವರ ಸಹಾಯದಿಂದ ಆತನನ್ನು ಹಿಡಿದು ವಿಚಾರಿಸಿದಾಗ ಕೋವಿಯನ್ನು ಹೊಂದಲು ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2021 ಕಲಂ: 3(1), 25 ಭಾರತೀಯ ಶಸ್ತ್ರಾಸ್ತ್ರ ಕಾಯಿದೆ 1959 ರಂತೆ ಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment