ಓವರ್ ಟೆಕ್ ಮಾಡುವ ಭರದಲ್ಲಿ ಬಸ್ಸಿನ ಬಲ ಸೇಪ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನು ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಬೆಳ್ಮಣ್ ನಲ್ಲಿ ನಡೆದಿದೆ.
ದಿನಾಂಕ 26/01/2021 ರಂದು ಸಂಜೆ 7:30 ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ KA-19-ED-8653 ನೇ ನೋಂದಣಿಯ ಬೈಕ್ ಸವಾರನು ಆತನ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬೇರೊಂದು ವಾಹನವನ್ನು ಓವರ್ಟೇಕ್ ಮಾಡಿ ತೀರಾ ರಸ್ತೆಯ ಬಲಭಾಗಕ್ಕೆ ಸವಾರಿ ಮಾಡಿ ಕಿನ್ನಿಗೋಳಿಯಿಂದ ಬೆಳ್ಮಣ್ ಕಡೆ ಬರುತಿದ್ದ KA-19-C-6019 ನೇ ಬಸ್ಸಿನ ಬಲ ಸೇಪ್ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನು ವಾಹನ ಸಮೇತ ರಸ್ತೆಗೆ ಬಿದ್ದಿದ್ದಾನೆ.
ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಹಾಗೂ ಬಲಕಾಲಿಗೆ ಗಂಭೀರ ಗಾಯಗಳಾಗಿದ್ದು ಉಡುಪಿ ಆದರ್ಶ ಆಸ್ಪತ್ರೆಗೆ ಬಸ್ಸಿನ ಚಾಲಕ ಉದಯ ಎಂಬುವವರು ದಾಖಲಿಸಿದ್ದಾರೆ.. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಾಹೀರಾತು
Post a comment