ಹೆಬ್ರಿ ತಾಲೂಕಿನ ಕಬ್ಬಿನಾಲೆ ಮತ್ತವು ನಿವಾಸಿ ಕೂಲಿ ಕಾರ್ಮಿಕ ರಾಮಕೃಷ್ಣ ಗೌಡನ ಮೇಲೆ ನಿನ್ನೆ ಮಧ್ಯಾಹ್ನ ಕರಡಿಯೊಂದು ದಾಳಿ ಮಾಡಿ ಗಂಭೀರ ಗಾಯ ಗೊಳಿಸಿದ ಘಟನೆ ನಡೆದಿದೆ.
ರಾಮಕೃಷ್ಣಗೌಡ ಎಂದಿನಂತೆ ತನ್ನ ಕೆಲಸ ನಿಮಿತ್ತ ಕಾಡಿಗೆ ತೆರಳಿದ್ದಾಗ .ಏಕಾ ಏಕಿ ಕರಡಿವೊಂದು ಪ್ರತ್ಯಕ್ಷವಾಯಿತು .ಇದರಿಂದ ಗಾಬರಿಗೊಂಡ ರಾಮಕೃಷ್ಣಗೌಡ ಕರಡಿಯಿಂದ ಬಚಾವ್ ಆಗಲು ಮರ ಹತ್ತಿದ .ಆದರೆ ಕರಡಿ ಇವನ ಬೆನ್ನತ್ತಿದ ಪರಿಣಾಮ ಕಾಲಿಗೆ ಬಲವಾದ ಗಾಯ ಮಾಡಿತ್ತು .ಈತ ಜೋರಾಗಿ ಕೂಗಿಕೊಂಡ ಪರಿಣಾಮ ಕರಡಿ ಓಡಿ ಹೋಗಿದೆ.
ತೀವ್ರ ಗಾಯಗೊಂಡ ರಾಮಕೃಷ್ಣಗೌಡ ಅವರನ್ನು ಸ್ಥಳೀಯರು ಮುನಿಯಾಲು ಆಸ್ಪತ್ರೆಗೆ ದಾಖಲು ಮಾಡಿದ್ದರು .ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಹೆಬ್ರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ . ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಕಬ್ಬಿನಾಲೆ ಸೋಮೇಶ್ವರ ಅಭಯಾರಣ್ಯದಲ್ಲಿ ಕರಡಿ ಕಂಡುಬಂದಿತ್ತು ಎಂದು ಸ್ಥಳೀಯರು ಹೇಳುತ್ತಾರೆ .ಘಟನೆ ನಂತರ ಸ್ಥಳೀಯರು ಆತಂಕದಲ್ಲಿ ಇದ್ದಾರೆ .
ಜಾಹೀರಾತು
Post a comment