ಕಾರ್ಕಳ:ಯುವತಿಯರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದ ಆರೋಪದಲ್ಲಿ ಕಲ್ಯಾ ಗ್ರಾಮದ ಕುಂಟಾಡಿ ಅಶೋಕ ನಗರದ ಎಂಬಲ್ಲಿ ಚಲಿಸುತ್ತಿದ್ದ ಬಸ್ಸನ್ನು ತಡೆದು ನಿಲ್ಲಿಸಿ ನಿರ್ವಾಹಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆಯ ವಿವರ:
ಕೋಟಾ ವಡ್ಡರ್ಸೆ ಎಮ್.ಜಿ. ಕಾಲೋನಿಯ ಶಮೀರ್ ಪರಾಶ್ (20) ಮೇಲೆ ಹಲ್ಲೆ ಮಾಡಲಾಗಿದೆ.ಕೆಎ-20-ಎಎ-1674 ನೇ ನಂಬ್ರದ ಕೃಷ್ಣ ಪ್ರಸಾದ್ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು, ಜನವರಿ 15ದಂದು ಬೆಳಿಗ್ಗೆ 9.30ಕ್ಕೆ ಮೂಡುಬೆಳ್ಳೆ-ಪಳ್ಳಿ-ಕಲ್ಯಾ ಮಾರ್ಗವಾಗಿ ಬಸ್ಸು ಹಾದು ಬರುತ್ತಿದ್ದ ಸಂದರ್ಭದಲ್ಲಿ ಆರೋಪಿತರಾದ ಅಶೋಕ, ಸಂತೋಷ ಎಂಬವರು ಇತರ ಇಬ್ಬರೊಂದಿಗೆ ಸೇರಿ ಬಸ್ಸನ್ನು ತಡೆದು ನಿಲ್ಲಿಸಿ ನಿವಾಹಕ ಶಮೀರ್ ಪರಾಶ್ನನ್ನು ಬಸ್ಸಿನಿಂದ ಹೊರಗೆ ಎಳೆದು ಹುಡುಗಿಯರೊಂದಿಗೆ ಅಸಭ್ಯ ರೀತಿಯಲ್ಲಿ ಮಾತನಾಡುಸುತ್ತೀಯಾ ಎಂದು ಬೈದು ತಲೆ ಹಾಗೂ ಕೆನ್ನೆ ಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾರೆ.
ಈ ಬಗ್ಗೆ ಶಮೀರ್ ಪರಾಶ್ ಅವರು ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021 ಕಲಂ 341, 323, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಪೊಲೀಸ್ ವರದಿ:
ಕಾರ್ಕಳ: ಪಿರ್ಯಾದಿದಾರರಾಧ ಶಮೀರ್ ಪರಾಶ್ (20) ತಂದೆ: ರುಜ್ವಾನ್ ವಾಸ: ಎಮ್,ಜಿ ಕಾಲೋನಿ, ವಡ್ಡರ್ಸೆ ಕೋಟಾ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರು ಕೆಎ-20-ಎಎ-1674 ನೇ ನಂಬ್ರದ ಕೃಷ್ಣ ಪ್ರಸಾದ್ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 15/01/2021 ರಂದು ಉಡುಪಿಯಿಂದ ಮೂಡುಬೆಳ್ಳೆ-ಪಳ್ಳಿ-ಕಲ್ಯಾಮಾರ್ಗವಾಗಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬರುತ್ತಿರುವಾಗ ಬೆಳಿಗ್ಗೆ 09:30 ಗಂಟೆಗೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕುಂಟಾಡಿ ಅಶೋಕ ನಗರ ಎಂಬಲ್ಲಿ ಆರೋಪಿತರಾದ ಅಶೋಕ್ ಹಾಗೂ ಮಾವಿನಕಟ್ಟೆ ಸಂತೋಷ್ ಎಂಬವರು ಇತರ ಇಬ್ಬರೊಂದಿಗೆ ಬಸ್ಸನ್ನು ತಡೆದು ನಿಲ್ಲಿಸಿ ಬಸ್ಸಿನಿಂದ ಶಮೀರ್ ಪರಾಶ್ ರವರನ್ನು ಕೆಳಕ್ಕೆ ಎಳೆದು “ ಬಸ್ಸಿನಲ್ಲಿ ಪ್ರಯಾಣಿಸುವ ಹುಡುಗಿರೊಂದಿಗೆ ಅಸಭ್ಯವಾಗಿ ಮಾತನಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಶಮೀರ್ ಪರಾಶ್ ರವರ ತಲೆ ಹಾಗೂ ಕೆನ್ನೆಗೆ ಕೈಯಿಂದ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021 ಕಲಂ: 341, 323, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment