ದಿನಾಂಕ 26.01.2021ರಂದು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ 'ಸನದು ಪ್ರದಾನ ದಿನಾಚರಣೆ'ಯನ್ನು ರೋಟರಿ ಕ್ಲಬ್ ಕಾರ್ಕಳ ಇವರ ಸಹಯೋಗದೊಂದಿಗೆ ಡಾ.ಟಿ.ಎಂ.ಎ. ಪೈ ರೋಟರಿ ಹಾಸ್ಪಿಟಲ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಎರಡೂ ರೋಟರಿ ಕ್ಲಬ್ ಗಳ ಪ್ರಾಯೋಜಕತ್ವದಲ್ಲಿ ಆಸ್ಪತ್ರೆಯ ಮುಂಭಾಗದ ಮುಖ್ಯರಸ್ತೆಗೆ ರಸ್ತೆತಡೆ ಬೇಲಿಯನ್ನು ಸ್ಥಳೀಯ ನಗರ ಆರಕ್ಷಕ ಉಪನಿರೀಕ್ಷರಾದ ಶ್ರೀ ಮಧು ಬಿ ಎ ಇವರು ಉಧ್ಘಾಟಿಸುವುದರ ಮೂಲಕ ಲೋಕಾರ್ಪಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ರೋಟರಿ ಜಿಲ್ಲೆಯ ಜೋನ್ 05ರ ಅಸಿಸ್ಟೆಂಟ್ ಗವರ್ನರ್ ರೊ.ನವೀನ್ ಅಮೀನ್, ಮಾರ್ಗದರ್ಶಕರಾದ ರೊ.ಪಿಡಿಜಿ ಡಾ.ಭರತೇಶ್ ಆದಿ ರಾಜ್, ಮುಖ್ಯ ವೈದ್ಯಾಧಿಕಾರಿಗಳಾದ ರೊ.ಡಾ.ಕೀರ್ತಿನಾಥ ಬಲ್ಲಾಳ್, ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರೊ.ರೇಖಾ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪೂರ್ವಾಧ್ಯಕ್ಷರಾದ ರೊ.ಸುರೇಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು..ಎರಡೂ ಕ್ಲಬ್ಬಿನ ರೋಟರಿ ಸದಸ್ಯರು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಮಾರಂಭದಲ್ಲಿ ಭಾಗವಹಿಸಿದ್ದರು.ರೊ.ಗೀತಾ ರಾವ್ ಕಾರ್ಯಕ್ರಮ ನಿರೂಪಿಸಿದರು.ರೊ.ಗಣೇಶ ಬರ್ಲಾಯ ವಂದನಾರ್ಪಣೆ ಮಾಡಿದರು.
Post a comment