ಕರ್ನಾಟಕದಲ್ಲಿ ದೇವಾಡಿಗ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರಿಗೆ ಬುಧವಾರ ಹೆಬ್ರಿ ತಾಲ್ಲೂಕು ದೇವಾಡಿಗರ ಸುಧಾರಕ ಸಂಘದ ಮುಖಂಡರು ಎಚ್. ಜನಾರ್ಧನ್ ನೇತ್ರತ್ವದಲ್ಲಿ ಮನವಿ ಸಲ್ಲಿಸಿದರು.
ಪ್ರತಿ ತಾಲ್ಲೂಕಿನಲ್ಲೂ ಆಯಾ ಕ್ಷೇತ್ರಗಳ ಶಾಸಕರಿಗೆ ಮನವಿ ಸಲ್ಲಿಸಿ ಸಮುದಾಯದ ಜನತೆಯ ಸ್ಥಿತಿಗತಿಯನ್ನು ಮನವರಿಕೆ ಮಾಡಿ ಬಳಿಕ ದೇವಾಡಿಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನಗಳ ಜೊತೆಗೆ ದೇವಾಡಿಗ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಶಾಸಕರ ಜತೆಗೂಡಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೆಬ್ರಿ ದೇವಾಡಿಗ ಸುಧಾರಕ ಸಂಘದ ಮುಖಂಡ ಎಚ್. ಜನಾರ್ಧನ್ ತಿಳಿಸಿದರು.
ಹೆಬ್ರಿ ತಾಲ್ಲೂಕು ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ ಶಂಕರ ದೇವಾಡಿಗ, ಮಾಜಿ ಅಧ್ಯಕ್ಷ ಸದಾನಂದ ಮೊಯಿಲಿ, ಕೃಷ್ಣ ಶೇರಿಗಾರ್ ಚಾರ, ಸುಧಾಕರ ಸೇರಿಗಾರ್ ಹೆಬ್ರಿ, ರಘುರಾಮ ದೇವಾಡಿಗ ಬಚ್ಚಪ್ಪು, ಪ್ರಮೀಳ ರಘುರಾಮ್, ಸುನೀತಾ ರತ್ನಾಕರ್ ಜರ್ವತ್ತು ಇದ್ದರು.
Post a comment