ನಂದಳಿಕೆ:ಕಾರು-ಬೈಕ್ ಡಿಕ್ಕಿ-Times of karkala

 ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ನಂದಳಿಕೆ ಅಬ್ಬನಡ್ಕ ತಿರುವಿನ ಬಳಿ ನಡೆದಿದೆ.

ಬೆಳ್ಮಣ್ ನಿವಾಸಿ‌ ಶ್ರೀಜಿತ್‌ ಕುಲಾಲ್ ಎಂಬುವವರು‌ ದಿನಾಂಕ 04/01/2021 ರಂದು ಸಂಜೆ  6:30 ಗಂಟೆಯ ಸಮಯಕ್ಕೆ  ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ  ಅಬ್ಬನಡ್ಕ  ತಿರುವಿನಲ್ಲಿ   ತನ್ನ  ಅಣ್ಣ ಪದ್ಮನಾಭ ಕುಲಾಲ್‌ ಎಂಬುವವರನ್ನು ಸಹಸವಾರನಾಗಿ  ಕುಳ್ಳಿರಿಸಿಕೊಂಡು ಇಟಮೇರಿ ಕಡೆಯಿಂದ ಮಂಜರಪಲ್ಕೆ  ಕಡೆಗೆ  ಮಂಜರ ಪಲ್ಕೆ  - ಬೋಳ ಪದವು ರಸ್ತೆಯಲ್ಲಿ  ಹೋಗುತ್ತಿದ್ದಾಗ  ಮಂಜರ ಪಲ್ಕೆ ಕಡೆಯಿಂದ ಬೋಳ ಪದವು  ಕಡೆಗೆ ಬರುತ್ತಿದ್ದ KA-19-MD-6623 ನೇ ನೋಂದಣಿಯ  ಪೋರ್ಡು ಕಾರು  ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ.

ಇದರಿಂದ ಬೈಕ್ ನಲ್ಲಿದ್ದ ಈರ್ವರೂ  ರಸ್ತೆಗೆ ಎಸೆಯಲ್ಪಟ್ಟಿದ್ದು  ಶ್ರೀಜಿತ್ ಕುಲಾಲ್ ಗಾಯಗೊಂಡು ಚಿಕಿತ್ಸೆಗಾಗಿ ಕಾರ್ಕಳ ನರ್ಸಿಂಗ್ ಹೋಮ್ ಗೆ ದಾಖಲಾಗಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







ಜಾಹೀರಾತು 

  



 




Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget